ದಿನಾಂಕ:
ರಿಗೆ,
ಅಧ್ಯಕ್ಷರು
ಹಳ್ಳಿಖೇಡ (ಬಿ) ಪುರಸಭೆ
ಹಳ್ಳಿಖೇಡ (ಬಿ) ತಾ : ಹುಮ್ನಾಬಾದ್
ಜಿ: ಬೀದರ್
ರಿಂದ,
ಭಕ್ತವೃಂದ
ಸರ್ವೇಶ್ವರ ದೇವಾಲಯ ,ಬ್ರಾಹ್ಮಣರ ಗಲ್ಲಿ
ಹಳ್ಳಿಖೇಡ (ಬಿ) ತಾ : ಹುಮ್ನಾಬಾದ್
ಜಿ: ಬೀದರ್
ವಿಷಯ : ಸರ್ವೇಶ್ವರ ದೇವಾಲಯಕ್ಕೆ ಹೋಗುವ ಸಾರ್ವಜನಿಕ ದಾರಿಯ ಬಗ್ಗೆ
ಮಾನ್ಯರೇ,
ಸರ್ವೇಶ್ವರ ದೇವಾಲಯವು ಸಣ್ಣ ಸಭೆಗಳು ಮತ್ತು ಸಾರ್ವಜನಿಕ ಕಾರ್ಯಕ್ರಮ ನಡೆಸುವ ಸ್ಥಳವಾಗಿದ್ದು, ಅದಕ್ಕೆ ಹೋಗುವ ಸಾರ್ವಜನಿಕ ದಾರಿಯಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಕಾರ್ಯವು ನಡೆಯುತ್ತಿದ್ದು , ಭಕ್ತಾದಿಗಳಿಗೆ ದೇವಸ್ಥಾನಕ್ಕೆ ಓಡಾಡಲು ಅನಾನುಕೂಲವಾಗಿದೆ. ಅದಕ್ಕಾಗಿ ತಾವುಗಳು ಅನಧಿಕೃತ ಕಟ್ಟಡದ ನಿರ್ಮಾಣ ಕಾರ್ಯವನ್ನು ತಕ್ಷಣಕ್ಕೆ ಸ್ಥಗಿತಗೊಳಿಸಿ, ದಾಖಲೆಗಳ ಪ್ರಕಾರ ಮಾಪನ ಮಾಡಿ ಸಾರ್ವಜನಿಕ ರಸ್ತೆಯನ್ನು ಮತ್ತೆ ಭಕ್ತಾದಿಗಳಿಗೆ ಓಡಾಡಲು ಅನುಕೂಲ ಮಾಡಿಕೊಡುವಂತೆ ಕೇಳಿಕೊಳ್ಳುತ್ತೇವೆ. ನಾವು ಕಟ್ಟಡದ ಹಳೆಯ ನಕ್ಷೆಯನ್ನು ಈ ಪತ್ರದ ಜೊತೆ ಲಗತ್ತಿಸಿರುತ್ತೇವೆ.
ಇಂತಿ ತಮ್ಮ ವಿಶ್ವಾಸಿ,
ಭಕ್ತವೃಂದ
ಸರ್ವೇಶ್ವರ ದೇವಾಲಯ
Comments
Post a Comment