ಶ್ರೀ ಕ್ಷೇತ್ರ ಗೋಕರ್ಣ ಚರಿತ್ರೆ

                   ಶ್ರೀ ಕ್ಷೇತ್ರ ಗೋಕರ್ಣ ಚರಿತ್ರೆ 
                                                
ಕರ್ನಾಟಕದ ಉತ್ತರಕನ್ನಡ  ಜಿಲ್ಲೆಯ ಪಶಿಮ ಕರಾವಳಿ ಭಾಗದ ಕುಮಟಾ ತಾಲೂಕಿನಲ್ಲಿ ಬರುವ  ಪುಣ್ಯಕ್ಷೇತ್ರವೇ ಗೋಕರ್ಣ . ಇಲ್ಲಿ ಪರಶಿವನ ಆತ್ಮಲಿಂಗವಿದೆ . ಇಲ್ಲಿ ಇರುವ ಶಿವನ ಆತ್ಮಲಿಂಗವನ್ನು ಶ್ರೀ ಮಹಾಬಲೇಶ್ವರ ಎನ್ನುತ್ತಾರೆ  . ಗೋಕರ್ಣದ ಐತಿಹಾಸಿಕ ಹಿನ್ನಲೆಯನ್ನ ನೋಡಿದಾಗ ಇದಕ್ಕೆ ಯುಗ ಯುಗಾಂತರ ಐತಿಹ್ಯವಿದೆ . 
 

 ನಮ್ಮ ಪುರಾತನ ಕಾವ್ಯಗಳಾದ  ರಾಮಾಯಣ ಮತ್ತು ಮಹಾಭಾರತದಲ್ಲಿ ಈ ಕ್ಷೇತ್ರದ ಉಲೇಖವಿದೆ .  ಭಾಗವತ , ಬ್ರಹ್ಮಾಂಡ ಸೇತುಮಾಲಾದಿಯಲ್ಲೂ ಈ ಕ್ಷೇತ್ರದ ವರ್ಣನೆಯಿದೆ . ಸಂಸ್ಕೃತ ಮಹಾಕವಿ ಕಾಳಿದಾಸ ತನ್ನ 'ರಘುವಂಶ ' ದಲ್ಲೂ ಗೋಕರ್ಣದ ಮಹಿಮೆಯನ್ನು  ಕೊಂಡಾಡಿದ್ದಾ   . ಇನ್ನು ಕ್ರಿ ಪೂ . ೬೬೦ ರಿಂದ ೬೬೪ ರಲ್ಲಿ  ಆಗಿಹೋದ  ಶ್ರೀ ಹರ್ಷ ಚಕ್ರವರ್ತಿ ಬರೆದ ನಾಟಕ 'ನಾಗಾನಂದ ' ಇದೆ ಗೋಕರ್ಣದಲ್ಲಿಯೇ ಆಗಿ ಹೋದ ಘಟನೆ .

 ಇನ್ನು ಇತ್ತೀಚಿನ  ಇತಿಹಾಸವನ್ನು ಅವಲೋಕಿಸಿದಾಗ ಕ್ರಿ ಶ . ೪ರಲ್ಲಿ ಕದಂಬ ರಾಜ್ಯ ಸ್ಥಾಪಕ  ರಾಜ ಮಯೂರವರ್ಮ ದ್ರದ ಅಹಿಚ್ಛತ್ರದಿಂದ ಬ್ರಾಹ್ಮಣರನ್ನು ಇಲ್ಲಿಗೆ  ಕರೆದುಇಲ್ಲಿನ ಲ್ಲಿನ ದೇವಾಲಯಗಳ 
ಪೂಜಾದಿ  ಉತ್ಸವಗಳು ಸಾಂಗವಾಗಿ ನೆರವೇರುವಂತೆ ನೋಡಿಕೊಂಡ ಬಗ್ಗೆ ದಾಖಾಲೆಗಳಿವೆ .   ಈಗ ಯುಗಾರಂಭದಿಂದ  ಇಲ್ಲಿಯ ತನಕ ಈ ಕ್ಷೇತ್ರಕ್ಕೆ  ತನ್ನದೆಯಾದ ಇತಿಹಾಸ ,ಕಥೆ , ಪರಂಪರೆಗಳಿವೆ . 


                      ಶಿವನ  ಆತ್ಮಲಿಂಗದ ಕಥೆ 

 ತ್ರೇತಾಯುಗದ ಸಮಯದಲ್ಲಿ ವಿವಶ್ರವಸು ನೆಂಬ ಮಹರ್ಷಿ ಇದ್ದರು . ಇವರು ಸೃಷ್ಟಿಕರ್ತ ಬ್ರಹ್ಮಮಾನಸ ಪುತ್ರರಲ್ಲಿ ಪುಲಸ್ತ್ಯನೆಂಬ ಬ್ರಹ್ಮರ್ಷಿಯ ಮಗ . ಈ ವಿಶ್ರಸುವಿನ ಮಗನೇ ಲೋಕದ  ಸಂಪತ್ತಿಗೆ ಅಧಿಪತಿಯಾದ ಕುಬೇರ . ವಿಶ್ರವಸುವಿನ ಇನೊಬ್ಬ ಪತ್ನಿಯಾದ  ಕೈಕಸಿ . ಇವಳು ರಾಕ್ಷಸ ರಾಜನಾದ ಸುಮಾಲಿಯ ಮಗಳು . ಇವಳಿಗೆ ಹುಟ್ಟಿದ ಮಕ್ಕಳೇ ರಾವಣ , ಕುಂಭಕರ್ಣ ,ಶೂರ್ಪಣಕಿ ಮತ್ತು ವಿಭೇಷಣ . ಇವರೆಲ್ಲರೂ ದೊಡ್ಡವರಾದರು . ರಾವಣ ಮತ್ತು ಕುಂಭ.ಕರ್ಣ  ರಾಕ್ಷಸ ಗುಣವನ್ನು ಹೊಂದಿದ್ದರು , ಋಷಿ ಮುನಿಗಳಿಗೆ ಪೀಡಿಸುತ್ತಾ ಮುಂದುವರೆದರು. ವಿಭೀಷಣನು ಗುಣವಂತ ಮತ್ತು ಧರ್ಮಜ್ಞಾನಿಯಾಗಿದ್ದನು  . 

ಒಂದು ದಿನ ಕುಬೇರನು ತನ್ನ ತಂದೆಯನ್ನು ನೂಡಲು ಬಂದಿದ್ದನು . ಆವಾಗ ಕೈಕಸಿ ತನ್ನ ಮಕ್ಕಳಿಗೆ 
''ಮಕ್ಕಳೇ ನೋಡಿ ಈ ಲಂಕಾಧಿಪತಿ ಕುಬೇರ ಎಷ್ಟು ಧನವಂತ, ನೀವು ಹೀಗೆಯಾಗಬೇಕು ,ಹೋಗಿ ಸೃಷಿಕರ್ತ ಬ್ರಹ್ಮದೇವನನ್ನು ಪ್ರಸನ್ನ ಮಾಡಿ ಅವರಿಂದ ವರವನ್ನು ಪಡೆದುಕೊಳ್ಳಿ ''ಎಂದಳು . ಮೂರೂ ಜನರು ಗೋಕರ್ಣ ಕ್ಷೇತ್ರದಲ್ಲಿ ಬ್ರಹ್ಮನನ್ನು ಕುರಿತು ತಪಸ್ಸನ್ನಾಚರಿಸಿದರು . ಕೆಲವು  ವರ್ಷದ ಕಳಿದ ಮೇಲೆ ಬ್ರಹ್ಮನು ಇವರ ಭಕ್ತಿಗೆ ಮೆಚ್ಚಿದ . ಬ್ರಹ್ಮದೇವನು ರಾವಣನ ಬಳಿ ಹೋಗಿ ''ಹೇ ದಶಮುಖನೇ ನಿನ್ನ ಭಕ್ತಿಗೆ ಮೆಚ್ಚಿದೀನೆ ,ಬೇಡು ಏನು ವರಬೇಕೆಂದು'' ಎಂದು ಕೇಳಿದ  . ರಾವಣನು ''ಸೃಷ್ಟಿಕರ್ತ ಬ್ರಹ್ಮ ನಾನು ಕಪಿ ಮತ್ತು ಮನುಷ್ಯರ ಬಿಟ್ಟು ಬೇರೆಯರು ನನ್ನನ ಕೊಳಬಾರದು '' ಎಂದು ವರವನ್ನು ಬೇಡಿದ .ಬ್ರಹ್ಮನು ''ತಥಾಸ್ತು ಎಂದನು .  

  ಬಹ್ಮನು ವಿಭೇಷಣನಗೆ ಏನು ವರ ಬೇಕೆಂದಾಗ  ವಿಭೇಷಣನು ''ನನಗೆ ದೇವರ ಮೇಲೆ ಏನಿಷ್ಠು ಭಕ್ತಿ ಬರಲಿ ಮತ್ತು ನಾನು ಚಿರಂಜೀವಿಯಾಗಿರಬೆಕೆಂದು ಬೇಡಿದನು . ಬ್ರಹ್ಮ ತಥಾಸ್ತು ಎಂದು ಕುಂಭಕರ್ಣನ ಕಡೆಗೆ ಸಾಗಿದನು . ದೇವತುಗಳು ಚಿಂತತರಾದರು ,ಒಬ್ಬ ದೇವತೆ ''ಈ ಕುಂಭಕರ್ಣನು ಬ್ರಹ್ಮದೇವರಿಂದ ಇನ್ನಷ್ಟು ಶಕ್ತಿಯ ವರವನ್ನು ಬೇಡಿದರೆ ಇವನು ಋಷಿ ಮುನಿಗಳು ಮತ್ತು ಮನುಷ್ಯರಿಗೆ ಇನ್ನಿಷ್ಟು ಪೀಡಿಸುತ್ತಾನೆ ,ನಾವೇನಾದರೂ ಮಾಡಬೇಕು''. 

 ಎಂದನು . ಚಿಂತಿತರಾದ ದೇವತೆಗಳು ವಿದ್ಯಾ ದೇವಿಯಾದ ಸರಸ್ವತಿಯ ಬಳಿ ಹೋದರು . ದೇವಿ ಸರಸ್ವತಿಗೆ ಈ ವಿಷಯವನ್ನು ಹೇಳಿದರು . ಸರಸ್ವತ್ ದೇವಿ ''ಆಯಿತು ನಾನು ನಿಮ್ಮ ಸಹಾಯ ಮಾಡುವೆ ಎಂದು ಹೇಳಿದಳು . ಬ್ರಹ್ಮನು ಕುಂಭಕರ್ಣ ಬಳಿಬಂದು ವಾರ ಕೇಳು ಎಂದಾಗ ಕುಂಭಕರ್ಣನು ಕೇಳುವಷ್ಟರಲ್ಲಿ ದೇವಿ ಸರಸ್ವತಿ ಕುಂಭಕರ್ಣ ನಾಲಿಗೆ ಮೇಲೆ ಕುಳಿತುನನಗೆ ಆರು ತಿಂಗಳ ನಿದ್ರೆಬೇಕೆಂದು ಸರಸ್ವತಿ ಕುಂಭಕರ್ಣ ಬಾಯಿಯಿಂದ ಹೇಳಿದಳು .ತಥಾಸ್ತು ಎಂದು ಬ್ರಹ್ಮ ಮಾಯವಾದನು . 

ಈಗ ವರ ಪಡೆದ   ರಾವಣನು ಲಂಕವನ್ನು ಜಯಿಸಲು ಹೊರಟ . ತ್ರಿಲೋಕಸಂಚಾರಿಯಾದ ನಾರದರರು ಕುಬೇರನಿಗೆ ಮೊದಲೇ ಸೂಚಿಸಿದ್ದರು.  ಕುಬೇರನು ತನ್ನ ಸಂಪತ್ತುಗಳನ್ನು ತೊರೆದ ಲಂಕೆಯನ್ನು ಬಿಟ್ಟುಹೋದನು.ಹೀಗೆ ರಾವಣನ ವಿಜಯ ಯಾತ್ರೆ ಸಫಲಗೊಂಡಿತು . ಲಂಕೆಯ ಮೇಲೆ ರಾಜಮಾಡಿದ ರಾವಣನನ್ನ ಲಂಕೇಶ ಎಂದು ಹೆಸರುಬಂದಿತು . ಕುಬೇರನು ಶಿವ ಕುರಿತು ತಪಸ್ಸು ಮಾಡಿ ,ಮೆಚ್ಚಿದ ಶಿವನು ಅಲಾಕ ಎಂಬ ನಗರವನ್ನು ನಿರ್ಮಿಸಿದನು . 
  
ರಾವಣನು ಶಿವನು ಪರಮಭಕ್ತನಾಗಿದ್ದನು . ಲಂಕೆಯಲ್ಲಿ ರಾವಣನ ಮಾತೆಯಾದ ಕೈಕಸಿಯು ಒಂದು ಪಾರ್ಥಿವ ಲಿಂಗ ಪೂಜೆಯನ್ನು ಮಾಡಿಕೊಂಡು ಪೂಜೆ ಮಾಡುತ್ತಿರುವಾಗ ಸಮುದ್ರದ ಅಲೆಗಳು ಕೊಚ್ಚಿಕೊಂಡು ಹೋಗುತ್ತಿದ್ದವು . ಕೈಕಸಿಯು ದುಃಖವಾದಳು  . ಇದನ್ನು ನೋಡಿದ ರಾವಣ ತನ್ನ ತಾಯಿಗೆ ''ಆಳಬೇಡ  ತಾಯಿ ,ನಾನು ಶಂಕರ ಪೂಜಿಸುವ ಆತ್ಮಲಿಂಗವನ್ನೇ ತಂದುಕೊಡುವೆನು' ಎಂದು ಹೇಳಿ ಕೈಲಾಸದ  ಕಡೆಗೆ ಹೊರಟನು . 

ರಾವಣನು ಕೈಲಾಸಕ್ಕೆ ತಲುಪಿದಾಗ ಅವನು ತನ್ನ ಇಪ್ಪತ್ತು ತೋಳುಗಳ ಬಲದಿಂದ ಕೈಲಾಸವನ್ನೆತ್ತಲು ಕೈಲಾಸವನ್ನು ಅಲಗಾಡಿತು  . ಪಾರ್ವತಿ ಭಯದಿಂದ ಶಿವನನ್ನು ಅಪ್ಪಿಕೊಂಡಳು .ಆಗ ಶಿವನು ಎಡಗಾಲಿನಿಂದ ಅಂಗುಷ್ಠವನ್ನು ಭೂಮಿಗೆ ಒತ್ತಿದನು . ಆಗ ರಾವಣನ ಕೈಗಳು ಪರ್ವತದ ಅಡಿಯಲ್ಲಿ ಸಿಲುಕಿದವು. ರಾವಣನು ನೋವಿನಿಂದ ನರಳುತ್ತಾ ಶಿವನನ್ನು ಪ್ರಾರ್ಥಿಸಲು ಈಶ್ವರನ ಕಲ್ಲನ್ನೆತ್ತಿದನು . 
ಸ್ವಲ್ಪದಿನಗಳ ನಂತರ ರಾವಣನ ಭಕ್ತಿಗೆ ಮೆಚ್ಚಿ ಶಿವನು ಪ್ರತ್ಯಕ್ಷನಾದನು . ಶಿವನು ''ಭಕ್ತನೇ ನಿಂಗೆ ಏನು ವರವನ್ನು ಬೇಕು ಎಂದು ಕೆಳದನು . 




Comments

Popular posts from this blog

ಪ್ರವಾಸದ ನೆನಪುಗಳು - ಸಂಚಿಕೆ 1

ಮಹಾಭಾರತ- ಆದಿ ಪರ್ವ