ಪ್ರವಾಸದ ನೆನಪುಗಳು - ಸಂಚಿಕೆ 1 ಪ್ರತಿ ವರ್ಷ ಡಿಸೆಂಬರ್ ಕ್ರಿಸ್ಮಸ್ ಹತ್ತಿರ ಬಂದಂತೆ ಎಲ್ಲರಿಗೂ ರಜಾ ದಿನಗಳು ಆರಂಭವಾಗುತ್ತವೆ. ಅದರಲ್ಲೂ ಐಟಿ/ಬಿಟಿ ಯಲ್ಲಿ ಕೆಲಸ ಮಾಡುವವರಿಗೆ ವರ್ಷದ ರಜಾ ದಿನಗಳು ಡಿಸೆಂಬರ್ ತಿಂಗಳ ಕೊನೆಯ ಎರಡು ವಾರಗಳು ಮಾತ್ರವೇ. ಪ್ರತಿ ವರ್ಷ ರಜಾ ಸಮಯದಲ್ಲಿ ಚಿಕ್ಕ ಪ್ರವಾಸ ಮಾಡುವ ಹವ್ಯಾಸ ಇಟ್ಟುಕೊಂಡಿದ್ದೇನೆ. ಕಳೆದ ವರ್ಷ ರಜೆ ಇದ್ದರೂ ಎಲ್ಲಿಗೂ ಹೋಗದ ಪರಿಸ್ಥಿತಿ. ಈ ವರ್ಷವಾದರೂ ಒಂದು ಸಣ್ಣ ಪ್ರವಾಸ ಮಾಡಲೇಬೇಕು ಅನ್ನೋ ಒಂದು ಆಸೆಯಂತೂ ಇತ್ತು. ಎಲ್ಲಿ ಕೇಳಿದರೂ ಕೊರೊನ ಮೂರನೇ ಅಲೆ ಮತ್ತು omricon ಸುದ್ದಿ. ಏನಾದರೂ ಆಗಲಿ ಎಂದು ಹುಚ್ಚು ಹಠ ಮಾಡಿ ನಮ್ಮ ಪ್ರವಾಸ ಆರಂಭ ಮಾಡಿದೆವು. Day - 1 : ಡಿಸೆಂಬರ್ ಇಪ್ಪತೈದು , ಶನಿವಾರ ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು, ಆರು ಗಂಟೆಗೆ ನಮ್ಮ ಪ್ರಯಾಣ ಆರಂಭಿಸಿದೆವು. ನಮ್ಮ ಪಯಣ ಬೆಂಗಳೂರು - ಶಿರಸಿ - ಬನವಾಸಿ- ಹುಬ್ಬಳ್ಳಿ ಕಡೆಗೆ. ತುಮಕೂರು ಹತ್ತಿರದ "ಶ್ರೀ ನಂಜುಂಡೇಶ್ವರ" ಹೋಟೆಲ್ ಮುಟ್ಟಿದಾಗ ಏಳುವರೆ ಗಂಟೆ. ಬೆಳಗ್ಗಿನ ಉಪಹಾರ ಮುಗಿಸಿ ನಮ್ಮ ಪ್ರಯಾಣ ಮುಂದುವರೆಸಿದ...
ಮಹಾಭಾರತ - ಆದಿ ಪರ್ವ ಶಂತನುವಿನ ಕಥೆ ಹಸ್ತಿನಾಪುರವೆಂಬ ರಾಜ್ಯದ ರಾಜನಾದ ಕುರು. ಕುರುವಿನ ಮಗನೇ ಶಂತನು . ಶಂತನುವಿನ ತಾಯಿ ಸುನಂದಾ . ಕೆಲ ಸಮಯ ಕಳೆದು ಹೋದಮೇಲೆ ರಾಜ ಕುರುವು ತನ್ನ ಮಗನನ್ನು ಉತ್ತರಾಧಿಕಾರಿ ಎಂದು ಘೋಷಿಸಿದನು . ಶಂತನುವೂ ಹಸ್ತಿನಾಪುರದ ರಾಜನಾದನು . ಕುರುವಿನು ತನ್ನ ಇಳಿವಯಸ್ಸಿನಿಂದ ತೀರಿಕೊಂಡನು . ಶಂತನುವಿನ ಆಡಳಿತದಲ್ಲಿ ರಾಜ್ಯ ಸುಖ ಸಮೃದ್ಧಿಯಲ್ಲಿತ್ತು . ಒಂದು ದಿನ ಮಹಾರಾಜ ಶಂತನು ಕಾಡಿಗೆ ಬೀಟೆಯಾಡಲು ಹ್ಹೋಗಿದ್ದನು . ಪ್ರಾಣಿಗಳನ್ನು ಹುಡುಕುತ್ತಾ ಗಂಗಾನದಿ ಕಿನಾರೆ...
ಶ್ರೀ ಕ್ಷೇತ್ರ ಗೋಕರ್ಣ ಚರಿತ್ರೆ ಕರ್ನಾಟಕದ ಉತ್ತರಕನ್ನಡ ಜಿಲ್ಲೆಯ ಪಶಿಮ ಕರಾವಳಿ ಭಾಗದ ಕುಮಟಾ ತಾಲೂಕಿನಲ್ಲಿ ಬರುವ ಪುಣ್ಯಕ್ಷೇತ್ರವೇ ಗೋಕರ್ಣ . ಇಲ್ಲಿ ಪರಶಿವನ ಆತ್ಮಲಿಂಗವಿದೆ . ಇಲ್ಲಿ ಇರುವ ಶಿವನ ಆತ್ಮಲಿಂಗವನ್ನು ಶ್ರೀ ಮಹಾಬಲೇಶ್ವರ ಎನ್ನುತ್ತಾರೆ . ಗೋಕರ್ಣದ ಐತಿಹಾಸಿಕ ಹಿನ್ನಲೆಯನ್ನ ನೋಡಿದಾಗ ಇದಕ್ಕೆ ಯುಗ ಯುಗಾಂತರ ಐತಿಹ್ಯವಿದೆ . ನಮ್ಮ ಪುರಾತನ ಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತದಲ್ಲಿ ಈ ಕ್ಷೇತ್ರದ ಉಲೇಖವಿದೆ . ಭಾಗವತ , ಬ್ರಹ್ಮಾಂಡ ಸೇತುಮಾಲಾದಿಯಲ್ಲೂ ಈ ಕ್ಷೇತ್ರದ ವರ್ಣನೆಯಿದೆ . ಸಂಸ್ಕೃತ ಮಹಾಕವಿ ಕಾಳಿದಾಸ ತನ್ನ 'ರಘುವಂಶ ' ದಲ್ಲೂ ಗೋಕರ್ಣದ ಮಹಿಮೆಯನ್ನು ಕೊಂಡಾಡಿದ್ದಾ . ಇನ್ನು ಕ್ರಿ ಪೂ . ೬೬೦ ರಿಂದ ೬೬೪ ರಲ್ಲಿ ಆಗಿಹೋದ ಶ್ರೀ ಹರ್ಷ ಚಕ್ರವರ್ತಿ ಬರೆದ ನಾಟಕ 'ನಾಗಾನಂದ ' ಇದೆ ಗೋಕರ್ಣದಲ್ಲಿಯೇ ಆಗಿ ಹೋದ ಘಟನೆ . ಇನ್ನು ಇತ್ತೀಚಿನ ಇತಿಹಾಸವನ್ನು ಅವಲೋಕಿಸಿದಾಗ ಕ್ರಿ ಶ . ೪ರಲ್ಲಿ ಕದಂಬ ರಾಜ...
Comments
Post a Comment