ಗೆಜ್ಜೆಯ ಧ್ವನಿ ಮಾಡುತ ಹೆಜ್ಜೆಯ ಮೇಲೆ ಹೆಜ್ಜೆ ಹಾಕುತ ನಿನ್ನ ಪೂಜೆಯನ್ನು ಸಾಧುಗಳು  ಮತ್ತು ಸಜ್ಜನರು ಮಾಡುವಾಗ ಮಜ್ಜಿಗೆಯೊಳಗಿನ ಬೆಣ್ಣೆ ಬರುವಂತೆ ಮೆಲ್ಲಗೆ ಬಾ. 

ಚಿನ್ನದ ಮಳೆ ಸುರಿಸುತಾ ಮನದ ಎಲ್ಲಾ ಬಯಕೆ ತೀರಿಸುತಾ , ನೀನು ಕೋಟಿ ಸೂರ್ಯರ ಪ್ರಕಾಶದಂತೆ ಹೊಳೆಯುತಾ , ಜನಕ ರಾಯನ ಮಗಳಾದ ನೀನು ಬೇಗ ಬಾ.. 

ಅತ್ತಿತ್ತ ಹೋಗದೆ ಭಕ್ತರ ಮನೆಯಲ್ಲೇ ಇರು. ನಿತ್ಯ ಪೂಜೆ ಮತ್ತು ನಿತ್ಯ ಸುಮಂಗಲ ಸ್ವೀಕರಿಸು. ಸತ್ಯವನ್ನೇ ತೋರುವ ಸಾಧುಗಳು ಮತ್ತು ಸಜ್ಜನರ ಮನಸಿನ್ನಲ್ಲಿ ಹೊಳೆಯುವ ಬಂಗಾರದ ಗೊಂಬೆ ನೀನು 

ಸಂಖ್ಯೆ ಇಲ್ಲದ ಭಾಗ್ಯವ ಕೊಟ್ಟು ಬಂಗಾರದ ಬಳೆಗಳನ್ನು ತೊಟ್ಟು ಕೈಯನ್ನು ತಿರುವುತಾ ಬಾ. ಹಣೆಗೆ ಕುಂಕುಮ ಇಟ್ಟುಕೊಂಡ ಕಮಲದ ಕಣ್ಣಿನವಳು, ವೈಕುಂಠದ ಒಡೆಯನಾದ ವೆಂಕಟರಮಣನ ಪಟ್ಟದ ರಮಣಿ(ಮುದ್ದಿನ ಹೆಂಡತಿ) ಬಾ. 

ಸಕ್ಕರೆ ತುಪ್ಪದ ಕಾಲುವೆಯನ್ನು ಹರಿಸಿ ಶುಕ್ರವಾರದ ಪೂಜೆಯ ವೇಳೆಗೆ ಪ್ರೀತಿಯಿಂದ ಅಳಗಿರಿ ರಂಗನ ಮತ್ತು ಚೊಕ್ಕ ಪುರಂದರ ವಿಠ್ಠಲನ ರಾಣಿಯಾದ ನೀನು ಮನೆಗೆ ಬಾ.



Comments

Popular posts from this blog

ಪ್ರವಾಸದ ನೆನಪುಗಳು - ಸಂಚಿಕೆ 1

ಮಹಾಭಾರತ- ಆದಿ ಪರ್ವ

ಶ್ರೀ ಕ್ಷೇತ್ರ ಗೋಕರ್ಣ ಚರಿತ್ರೆ