ನನ್ನ ಕಲ್ಪನೆಯ ದಾಂಪತ್ಯ ನೆನಪುಗಳು
(ಗಂಡನ ಅನಿಸಿಕೆ)
ಜಗತ್ತಾಗಿತ್ತು ಏಕಾಂತ ಬದುಕು
ಬಯಸಿತ್ತು ದಾಂಪತ್ಯದ ಮೆಲುಕು
ನಿನ್ನ ನೋಡಿದೊಡನೆ ಅನಿಸಿತು
ನೀನೆ ನನ್ನ ಬಾಳಿನ ಬೆಳಕು
ನಿನ್ನ ಸನಿಹ ಸದಾ ನಂದನ
ಅದಕ್ಕೆ ನಿನಗೆ ಅಭಿನಂದನಾ
ನೀನಿಲ್ಲದಿದ್ದರೆ ಸಿಗದು ಸಮಾಧಾನ
ನಿದ್ದೆ ಆಗುತಿತ್ತು ಅದ್ವಾನ
ಅದೆಷ್ಟೋ ಸಲ ಆಯಿತು ವಿರಸ
ಆದರೂ ಕಡಿಮೆ ಆಗಲಿಲ್ಲ ಸರಸ
ಬದುಕಲ್ಲಿ ಈಗಲೂ ಹರಿದಿದೆ ಪ್ರೀತಿಯ ರಸ
ಇರಲಿ ಸದಾ ಈ ರೀತಿಯ ಸರಸ
ಅದೆಷ್ಟೋ ವರುಷದ ದಾಂಪತ್ಯ ಕಳಿಯಿತು ಈಗ
ತಿಳಿಯಲಿಲ್ಲ ಕಲಿ ಕಾಲದ ವೇಗ
ಇನ್ನಷ್ಟು ಹೆಚ್ಚಲಿ ಪ್ರೇಮ
ಪ್ರೀತಿ-ಪ್ರೇಮ ಪಡೆಯಲಿ ಇನ್ನಷ್ಟು ವೇಗ
ನೀನೆ ನನ್ನ ನಲ್ಮೆಯ ರಮಣಿ
ನಿನಗೆ ನಾನು ಸದಾ ಚಿರಋಣಿ
ಕ್ಷಮಿಸು ನನ್ನ ತಪ್ಪುಗಳನು ಕಣ್ಮಣಿ
ಸದಾ ನೀನಾಗಿರುವೆ ನನಗೆ ವೀರಮಣಿ
ಹಳೆ ನೆನಪುಗಳು ಈಗಲೂ ನವೀನ
ನಮ್ಮ ಜೋಡಿ ಈಗಲೂ ರತಿ ಮದನ
ಸುಖವ ಉಣಿಸು ನಿರಂತರ,
ಸದಾ ಇರಲಿ ನಮ್ಮ ಸ್ನೇಹ ನವ-ನವೀನ
(ಹೆಂಡತಿಯ ಅನಿಸಿಕೆ)
ನಾನಾಗಿದ್ದೆ ಏಕಾಂಗಿ
ಆಗಬೇಕಿತ್ತು ಬಾಳ ಅರ್ಧ-ಅಂಗಿ
ನೀ ಬಂದೆ ನನ್ನ ಬಾಳಿನ ಆಸರೆಯಾಗಿ
ಇರಬೇಕು ಕೇವಲ ನನ್ನ ಬಾಳಿನ ದೊರೆಯಾಗಿ
ಮದುವೆಯಾದಾಗ ನೀ ಆದೆ ಗೆಳೆಯ
ಯಾವಾಗಲೂ ಸನಿಹ ಇದ್ದೆ ನನ್ನ ಇನಿಯ
ನನಗೇನು ಬೇಕಿತ್ತು ಇದರ ಹೊರತು
ಎಲ್ಲವೂ ನನಗೆ ಹೊಸತು ಹೊಸತು
ಮಕ್ಕಳ ಸಂಸಾರ ತುಂಬಾ ಗೋಜಲು
ನಾನಾದೆ ಒಂದು, ನೀನಾದೆ ಇನ್ನೊಂದು ಹೆಗಲು
ಜೀವನ ಬಂಡಿ ಸಾಗಿದೆ ಸರಿ ದಾರಿಯಲಿ
ಸಂಸಾರ ನಡೆದಿಹುದು ರಹದಾರಿಯಲಿ
ಅದೆಷ್ಟೋ ಸಲ ನೋಯಿಸಿದೆ ನಿನ್ನ ಮನ
ಆದರೆ ಯಾರ ಬಳಿ ಹೇಳಲಿ ನನ್ನ ದುಮ್ಮಾನ
ನೀ ಬೇಸರಿಸಿದಾಗ ನಾ ನಿನ್ನ ಪ್ರೇಮಿಸಿದೆ
ನೋಡು ಇಂದು ದಾಂಪತ್ಯ ಇನ್ನಷ್ಟು ಗಟ್ಟಿಯಾಗಿದೆ
ನೀನೆ ನನ್ನ ನಲ್ಮೆಯ ಜೊತೆಗಾರ
ನಿನ್ನ ಬಿಟ್ಟು ಇರಲಾರೆ ಮಾತುಗಾರ
ಕೊಡು ನಿನ್ನ ಇನ್ನಷ್ಟು ಗಳಿಗೆ
ಕರಗುವೆ ನಿನ್ನ ಪ್ರೀತಿಯ ಮಳೆಗೆ
ಜನ ನೋಡಿ ಹೇಳುತಿಹರು ಇರಲಿ ಹೀಗೆ ಜೋಡಿ
ನೂರು ವರ್ಷ ನಡೆಯಲಿ ಹೀಗೆ ಮೋಡಿ
ಸುಖ ಸಂಸಾರಕ್ಕೆ ಬೇಕು ಇಬ್ಬರ ಸಮ್ಮತಿ
ಇಲ್ಲದಿದ್ದರೆ ಜೀವನ ಅಧೋಗತಿ.....
-ದಿಲೀಪ್ ದೀಕ್ಷಿತ್
(ಗಂಡನ ಅನಿಸಿಕೆ)
ಜಗತ್ತಾಗಿತ್ತು ಏಕಾಂತ ಬದುಕು
ಬಯಸಿತ್ತು ದಾಂಪತ್ಯದ ಮೆಲುಕು
ನಿನ್ನ ನೋಡಿದೊಡನೆ ಅನಿಸಿತು
ನೀನೆ ನನ್ನ ಬಾಳಿನ ಬೆಳಕು
ನಿನ್ನ ಸನಿಹ ಸದಾ ನಂದನ
ಅದಕ್ಕೆ ನಿನಗೆ ಅಭಿನಂದನಾ
ನೀನಿಲ್ಲದಿದ್ದರೆ ಸಿಗದು ಸಮಾಧಾನ
ನಿದ್ದೆ ಆಗುತಿತ್ತು ಅದ್ವಾನ
ಅದೆಷ್ಟೋ ಸಲ ಆಯಿತು ವಿರಸ
ಆದರೂ ಕಡಿಮೆ ಆಗಲಿಲ್ಲ ಸರಸ
ಬದುಕಲ್ಲಿ ಈಗಲೂ ಹರಿದಿದೆ ಪ್ರೀತಿಯ ರಸ
ಇರಲಿ ಸದಾ ಈ ರೀತಿಯ ಸರಸ
ಅದೆಷ್ಟೋ ವರುಷದ ದಾಂಪತ್ಯ ಕಳಿಯಿತು ಈಗ
ತಿಳಿಯಲಿಲ್ಲ ಕಲಿ ಕಾಲದ ವೇಗ
ಇನ್ನಷ್ಟು ಹೆಚ್ಚಲಿ ಪ್ರೇಮ
ಪ್ರೀತಿ-ಪ್ರೇಮ ಪಡೆಯಲಿ ಇನ್ನಷ್ಟು ವೇಗ
ನೀನೆ ನನ್ನ ನಲ್ಮೆಯ ರಮಣಿ
ನಿನಗೆ ನಾನು ಸದಾ ಚಿರಋಣಿ
ಕ್ಷಮಿಸು ನನ್ನ ತಪ್ಪುಗಳನು ಕಣ್ಮಣಿ
ಸದಾ ನೀನಾಗಿರುವೆ ನನಗೆ ವೀರಮಣಿ
ಹಳೆ ನೆನಪುಗಳು ಈಗಲೂ ನವೀನ
ನಮ್ಮ ಜೋಡಿ ಈಗಲೂ ರತಿ ಮದನ
ಸುಖವ ಉಣಿಸು ನಿರಂತರ,
ಸದಾ ಇರಲಿ ನಮ್ಮ ಸ್ನೇಹ ನವ-ನವೀನ
(ಹೆಂಡತಿಯ ಅನಿಸಿಕೆ)
ನಾನಾಗಿದ್ದೆ ಏಕಾಂಗಿ
ಆಗಬೇಕಿತ್ತು ಬಾಳ ಅರ್ಧ-ಅಂಗಿ
ನೀ ಬಂದೆ ನನ್ನ ಬಾಳಿನ ಆಸರೆಯಾಗಿ
ಇರಬೇಕು ಕೇವಲ ನನ್ನ ಬಾಳಿನ ದೊರೆಯಾಗಿ
ಮದುವೆಯಾದಾಗ ನೀ ಆದೆ ಗೆಳೆಯ
ಯಾವಾಗಲೂ ಸನಿಹ ಇದ್ದೆ ನನ್ನ ಇನಿಯ
ನನಗೇನು ಬೇಕಿತ್ತು ಇದರ ಹೊರತು
ಎಲ್ಲವೂ ನನಗೆ ಹೊಸತು ಹೊಸತು
ಮಕ್ಕಳ ಸಂಸಾರ ತುಂಬಾ ಗೋಜಲು
ನಾನಾದೆ ಒಂದು, ನೀನಾದೆ ಇನ್ನೊಂದು ಹೆಗಲು
ಜೀವನ ಬಂಡಿ ಸಾಗಿದೆ ಸರಿ ದಾರಿಯಲಿ
ಸಂಸಾರ ನಡೆದಿಹುದು ರಹದಾರಿಯಲಿ
ಅದೆಷ್ಟೋ ಸಲ ನೋಯಿಸಿದೆ ನಿನ್ನ ಮನ
ಆದರೆ ಯಾರ ಬಳಿ ಹೇಳಲಿ ನನ್ನ ದುಮ್ಮಾನ
ನೀ ಬೇಸರಿಸಿದಾಗ ನಾ ನಿನ್ನ ಪ್ರೇಮಿಸಿದೆ
ನೋಡು ಇಂದು ದಾಂಪತ್ಯ ಇನ್ನಷ್ಟು ಗಟ್ಟಿಯಾಗಿದೆ
ನೀನೆ ನನ್ನ ನಲ್ಮೆಯ ಜೊತೆಗಾರ
ನಿನ್ನ ಬಿಟ್ಟು ಇರಲಾರೆ ಮಾತುಗಾರ
ಕೊಡು ನಿನ್ನ ಇನ್ನಷ್ಟು ಗಳಿಗೆ
ಕರಗುವೆ ನಿನ್ನ ಪ್ರೀತಿಯ ಮಳೆಗೆ
ಜನ ನೋಡಿ ಹೇಳುತಿಹರು ಇರಲಿ ಹೀಗೆ ಜೋಡಿ
ನೂರು ವರ್ಷ ನಡೆಯಲಿ ಹೀಗೆ ಮೋಡಿ
ಸುಖ ಸಂಸಾರಕ್ಕೆ ಬೇಕು ಇಬ್ಬರ ಸಮ್ಮತಿ
ಇಲ್ಲದಿದ್ದರೆ ಜೀವನ ಅಧೋಗತಿ.....
-ದಿಲೀಪ್ ದೀಕ್ಷಿತ್
Comments
Post a Comment