ಹತ್ತು ವರುಷದ ದಾಂಪತ್ಯ ನೆನಪುಗಳು
ಜಗತ್ತಾಗಿತ್ತು ಏಕಾಂತ ಬದುಕು
ಬಯಸಿತ್ತು ದಾಂಪತ್ಯದ ಮೆಲುಕು
ನಿನ್ನ ನೋಡಿದೊಡನೆ ಅನಿಸಿತು ನೀನೆ ನನ್ನ ಬಾಳಿನ ಬೆಳಕು
ಆ ನಿನ್ನ ಗಾಂಭೀರ್ಯ ನೋಡಲು ಅಂದ
ನಿನ್ನ ಪಟ-ಪಟ ಮಾತು ಕೇಳಲು ಚಂದ
ಕೊಟ್ಟೆ ನೀನು ಎರಡು ಮಕ್ಕಳ ಕುಟುಂಬ ಅದಕ್ಕೆ ನೆನೆಯುವೆನು ಹೇರಂಬ ...
ನಿನ್ನ ಸನಿಹ ಸದಾ ನಂದನ
ಅದಕ್ಕೆ ನಿನಗೆ ಅಭಿನಂದನಾ
ನೀನಿಲ್ಲದಿದ್ದರೆ ಆಗದು ಸಮಾಧಾನ ನಿದ್ದೆ ಆಗುವುದು ಅದ್ವಾನ
ಅದೆಷ್ಟೋ ಸಲ ಆಯಿತು ವಿರಸ
ಆದರೂ ಕಡಿಮೆ ಆಗಲಿಲ್ಲ ಸರಸ
ಬದುಕಲ್ಲಿ ಈಗಲೂ ಹರಿದಿದೆ ಪ್ರೀತಿಯ ರಸ ಇರಲಿ ಸದಾ ಸರಸ
ಹತ್ತು ವರುಷದ ದಾಂಪತ್ಯ ಕಳಿಯಿತು ಈಗ
ತಿಳಿಯಲಿಲ್ಲ ಕಲಿ ಕಾಲದ ವೇಗ
ಇನ್ನಷ್ಟು ಹೆಚ್ಚಲಿ ಪ್ರೇಮ ಸದಾ ಪ್ರೀತಿಗೆ ಬಾರದಿರಲಿ ರೋಗ
ನೀ ನನ್ನ ನಲ್ಮೆಯ ರಮಣಿ
ನಿನಗೆ ನಾನು ಸದಾ ಚಿರಋಣಿ
ಕ್ಷಮಿಸು ನನ್ನ ತಪ್ಪುಗಳ ಕಣ್ಮಣಿ ಸದಾ ನೀನಾಗಿರು ನನಗೆ ವೀರಮಣಿ
ಹಳೆ ನೆನಪುಗಳು ಈಗಲೂ ನವೀನ
ನಮ್ಮ ಜೋಡಿ ಈಗಲೂ ರತಿ ಮದನ
ಸುಖವ ಉಣಿಸು ನಿರಂತರ ಇರಲಿ ನಮ್ಮ ಸ್ನೇಹ ನವ-ನವೀನ
ನಿನ್ನ ಪ್ರೀತಿಯ ದಿಲೀಪ
ಮಾಡುವೆನು ಪ್ರೇಮ ಪ್ರಲಾಪ
ಬಿಡಿಸುತ್ತಿರು ಹೊಸ ಪ್ರೀತಿಯ ಕೃತಿ
ನನ್ನ ನಲ್ಮೆಯ ಶ್ರುತಿ...

Comments
Post a Comment