ಮಹಾಭಾರತ

ಮಹಾಭಾರತ ಕೌರವರು ಮತ್ತುಪಾಂಡವರ ನಡುವೆ ನಡೆದ ಮಹಾಯುದ್ಧ.ಇದು ಶ್ರೀ ಮಹರ್ಷಿ ವೇದವ್ಯಾಸರು  ೫೦೦೦ ವರ್ಷದ  ಹಿಂದೆ ಬರೆದಿದ್ದು . ಈ ಮಹಾಕಥೆಯ  ಮೊದಲ ಹೆಸರು ಜಯ.  ಅಂದರೆ ಗೆಲುವು.   ಕಾಲ  ಕಳೆದಂತೆ ಜನರು ಇದನ್ನು ಮಹಾಭಾರತ  ಎಂದು ಕರೆದರು . ಈ  ಕಥೆಯಲ್ಲಿಒಳ್ಳೆಯವರು ಇದ್ದಾರೆ,  ಕೆಟ್ಟವರು ಕೂಡ ಇದ್ದಾರೆ .ಒಳ್ಳೆಯವರೆಂದರೆ -ಯುಧಿಷ್ಠಿರ ,ವಿದುರ ,ಭೀಷ್ಮ ಇತ್ಯಾದಿ . ಕೆಟ್ಟವರು  ಅಂದರೆ ದುರ್ಯೋಧನ ,ಶಕುನಿ ಮಾಮ ,ದುಶ್ಯಾಸನ ಇತ್ಯಾದಿ.  ಬನ್ನಿ ಈ ಮಹಾಭಾರತ ಕಥೆಯನ್ನು ಆರಂಭಿಸೋಣ.   
                                           ಆದಿ  ಪರ್ವ 
                                  

                                    ಶಂತನುವಿನ ಕಥೆ 






ಶಂತನು ಹಸ್ತಿನಾಪುರದ ರಾಜನಾಗಿದ್ದನು. ಅವನು ಭರತವಂಶದ ರಾಜ ಕುರುವಿನ ಪುತ್ರ . ಅವನು ಒಂದು ದಿನ ಕಾಡಿಗೆ ಬೇಟೆ ಆಡಲು ಹೋಗಿದ್ದ . ಅವನು ಬೇಟೆ ಆಡುತ್ತಾ ಗಂಗಾ ತೀರಕ್ಕೆ ಬಂದನು, ಗಂಗಾನದಿಯ ಹತ್ತಿರ ಅವನಿಗೆ ಸುಂದರವಾದ ಹುಡುಗಿ ಕಾಣಿಸಿದಳು . ಅವನು ಅವಳ ಬಳಿ ಹೋಗಿ '' ಸುಂದರ ಯುವತಿ,  ನಿನ್ನ ಹೆಸರೇನು? ನೀನು ಯಾರು? ಎಂದನು.  ಅವಳು ಆವಾಗ  "ನಾನು ನನ್ನ ಪರಿಚಯ ಅಪರಿಚಿತ ವ್ಯಕ್ತಿಗೆ ಯಾಕೆ ಕೊಡಬೇಕು ?" . ಶಂತನು ಹೇಳಿದನು ''ನಾನು ಹಸ್ತಿನಾಪುರದ ರಾಜ, ನಾನು ನಿನ್ನೊಂದಿಗೆ ಪ್ರೇಮದಲ್ಲಿದೇನೆ ,ನನ್ನನ್ನು ವಿವಾಹ ಮಾಡಿ ಕೊಳ್ಳುವೆಯಾ ?.  ಅವಳು '' ನಾನು ಗಂಗಾ.  ಈ  ಸುಂದರ ನದಿಯ ದೇವತೆ, ನಾನು ನಿನ್ನ ಪತ್ನಿ ಆಗುತ್ತೇನೆ ಆದರೆ...  ಎಂದು ತಡವರಿಸಿದಳು . ಆಗ ಶಂತನು ''ಆದರೆ ಏನು ಎಂದು ಹೇಳಲು ಬಯಸಿರುವೆ'' ಎಂದು ಕೇಳಿದನು. ಅದಕ್ಕೆ ಗಂಗಾ "ನಾನು ನಿನ್ನ ಜೊತೆ ಮದುವೆ ಆದಮೇಲೆ ನೀನು  ನನ್ನನ್ನು ಏನೂ ಪ್ರಶ್ನಿಸಬಾರದು.  ಪ್ರಶ್ನಿಸಿದರೆ ನಾನು ನಿನ್ನನು ಬಿಟ್ಟು ಆ ಕ್ಷಣವೇ ದೂರ ಹೋಗುತ್ತೇನೆ ,ನೀವು ನನ್ನ ಷರತ್ತನ್ನು ಒಪ್ಪಿಕೊಳುವಿರಾ ರಾಜನೇ ? ಎಂದು ಕೇಳಿದಳು.   ಶಂತನು ಸ್ವಲ್ಪ ಸಮಯ ಆಲೋಚಿಸಿ "ನಾನು ನಿನ್ನ ಷರತ್ತನ್ನು ಒಪ್ಪಿಕೊಳ್ಳುವೆ   ಪ್ರಿಯೆ '' ಎಂದು ಮಾತು ಕೊಟ್ಟನು.  ಗಂಗೆ  ''ಆಯಿತು ನಾನು ಇನ್ನು ಮುಂದೆ ನಾನು ನಿನ್ನವಳು.. ಅವರಿಬ್ಬರ ವಿವಾಹವಾಯಿತು . ಅವರಿಬ್ಬರೂ ಸುಖವಾಗಿದ್ದರು . ಬಹು ತಿಂಗಳಾದ ಮೇಲೆ ಗಂಗಾ ಗೆ ಮಗು ಹುಟ್ಟಿತು . ಶಂತನುವಿಗೆ ಈ ವಿಷಯ ತಿಳಿದಂತೆ ಅವನು ಗಂಗಾಗೆ ಅಭಿನಂದನೆ ಕೊಡಲು ಅವಳ ಕಕ್ಷಕ್ಕೆ  ಹೋಗುತ್ತಿದ್ದನು , ಅವನು ಕಿಟಿಕಿಯಿಂದ ಅವನು ಗಂಗೆ ತನ್ನ ಕೂಸಿನೊಂದಿಗೆ ಅವಳು ಗಂಗಾ ನದಿಗೆ ಹೋಗುತ್ತಿದ್ದಳು ,ಶಂತನು ಅವಳ ಹಿಂದೆ ಹೋಗಿದನು , ಗಂಗಾ ತನ್ನ ಮಗನನ್ನು ಗಂಗಾ ನದಿಗೆ ಬಿಟ್ಟಳು ,ಶಂತನು ಅವಳನ್ನು ಪ್ರಶ್ನಿಸ ಬೇಕೆಂದು ಯೋಚಿಸಿದ ,ಆದರೆ ಅವನಿಗೆ ಅವಳ ಷರತ್ತು ನೆನಪಿಹು  ಅವನು ಸುಮ್ಮನೆ ಇದನ್ನ,. ಗಂಗೆ ತನ್ನ   ಏಳು ಪುತ್ರರನ್ನು ನದಿಗೆ ಬಿಟ್ಟಳು  . ಶಂತನುವಿಗೆ  ಬಹಳ ದುಃಖವಾಯಿತು ಆದರೂ ಅವನು ಗಂಗೆಗೆ  ಪ್ರಶ್ನಿಸಲಿಲ್ಲ.  ಗಂಗೆಗೆ ಎಂಟನೇಯ ಮಗು ಹುಟ್ಟಿತು ಅವಳು . ಎಂದಿನಂತೆ ಅವಳು ಗಂಗಾ ನದಿಯಲ್ಲಿ  ತನ್ನ ಮಗನನ್ನು ಗಂಗಾ ನದಿಗೆ ಬಿಡುಬೇಕೆನ್ನುವಾಗ  ಶಂತನು  '' ನಿಲ್ಲು ಗಂಗೆ  ನಿಲ್ಲು , ನೇನು  ಈ ತಾರಾ ನನ್ನ ಪುತ್ರರನ್ನು 
ಈ ತಾರಾ ಗಂಗಾ ನದಿಗೆ ಬಿಟ್ಟು ಕೊಲ್ಲುತಿದ್ದಿಯ   , ಗಂಗೆ  ನೇನು ನಿನ್ನ ಮಕ್ಕಳನ್ನು  ಯಾಕೆ ಕೊಲ್ಲುತಿದಿಯ  ಗಂಗೆ ?'' ಗಂಗಾ '' ಆರ್ಯ ಪುತ್ರನೇ ನೇನು  ನ್ನನ್ನ ಷರತ್ತನ್ನು ಮುರಿದಿರುವೆ ರಾಜನೇ , ಷರತ್ತಿನ ಪ್ರಕಾರ ನಾನು  ನಿನ್ನನು ಈ ಕ್ಷಣವೇ ಬಿಟ್ಟು ಹೋಗುವೆ ರಾಜನೇ  '' . ಶಂತನುವಿಗೆ ಅವಳ ಷರತ್ತು ನೆನಪಾಯಿತು , ಅವನು ಅವಳಿಗೆ '' ನೇಣು ನನ್ನ ಮೊದಲ ಏಳು ಪುತ್ರರನ್ನು ನೀನು   ಗಂಗಾ ನದಿಗೆ  ಯಾಕೆ  ಬಿಟ್ಟಿದೀಯ ಗಂಗೆ ''.  ಗಂಗಾ ''ಈ ಎಂಟು ಮಕ್ಕಳು ಹಿಂದಿನ ಜನ್ಮದಲ್ಲಿ ಇವರು ಋಷಿ  ವಶಿಷ್ಠರ ದನವನ್ನುಕದ್ದರು , ವಶಿಷ್ಠರಿಗೆ ಕೋಪ ಬಂದು ಅವರು ಈ ಎಂಟು ಮಕ್ಕಳಿಗೆ ಭೂಮಿಯಲ್ಲಿ
ಹುಟ್ಟಬೇಕೆಂದು ಶ್ರಾಪ ಕೊಟ್ಟರು , ಆ ಏಳು ಮಕ್ಕಳು ತಮ್ಮ ಶ್ರಾಪದಿಂದ  ಮುಕ್ತರಾಗಿದ್ದಾರೆ ಆದರೆ ಈ ಎಂಟನೆಯ ಮಗು ಈ ಶ್ರಾಪ ದಿಂದ  ಮುಕ್ತವಾಗುವುದಿಲ್ಲ .. 

ಶಂತನು '' ಈ  ಎಂಟನೇ ಮಗುವಾದರೂ ನನಗೆ ಕೊಡು  ಗಂಗೆ,  ಇಲ್ಲಂದರೆ  ಹಸ್ತಿನಾಪುರದ  ಮುಂದಿನ ಉತ್ತರಾಧಿಕಾರಿ  ಯಾರು ಗಂಗೆ ಕೊಡು ಗಂಗೆ '' ಎಂದನು . ಅವಳು '' ನಾನು ಇವನನ್ನು ಸರಿಯಾದ ಸಮಯ ಬಂದಾಗ  ನಾನು ಇವನನ್ನು  ನಿಮಗೆ ಕೊಡುತೇನೆ  , ನಾನು ಇವನ ಹೆಸರು ದೇವವ್ರತ ಎಂದು ಇಟ್ಟಿದ್ದೇನೆ . '' ಎಂದು ಕಾಣೆಯಾದಳು ..   ಶಂತನುವಿಗೆ ಬಹಳ ದುಃಖವಾಯಿತು . ಅವನು ಬೇಸರವಾಗಿ ಅರಮನೆಯ ಕಡೆಗೆ ಹೋದನು ... 

                               ದೇವವ್ರತನ ಭೂಮಿಗೆ ಆಗಮನ 

        ಶಂತನುವಿಗೆ ಗಂಗೆಯ ನೆನಪು ಬಂದಿದಾಗ ಅವನು ಗಂಗಾ ತೀರಕ್ಕೆ ಹೋಗುತ್ತಿದ್ದನು . ಏಳು ವರ್ಷ್ ಹೇಗೆ ಕಳೆಯಿತು  . ಒಂದು ದಿನ ಶಂತನು  ಗಂಗಾ ನದಿಗೆ ಹೋಗುತ್ತಿರುವಾಗ , ಗಂಗಾ ನದಿ ಕೇವಲ ಹತ್ತು ಬಾಣಗಳಿಂದ ನಿಂತಿದೆ . ಅವನಿಗೆ ಬಹಳ ಆಶ್ಚರ್ಯವಾಯಿತು ದಂಡೆಯ  ಬಳಿ ಒಬ್ಬ ಸಣ್ಣ ಹುಡುಗ ಕಾಣಿಸಿದನು . ಆ ಹುಡುಗನ ಬಳಿ ಬಿಲ್ಲು ಮತ್ತು ಬಾಣಗಳಿದ್ದವು .ಶಂತನು ಅವನ ಬಳಿ ಹೋಗಬೇಕೆಂದು ಹತ್ತಿರ ಹೋದರೆ ,ಆ ಕ್ಷಣವೆ ಗಂಗೆ ಪ್ರತೇಕ್ಷಳಾದಳು . ಗಂಗಾ ಶಂತನುವಿಗೆ '' ಹೇ ರಾಜನೇ ನಾನು ಇಲ್ಲಿ ನಿನ್ನ ಮಗನನ್ನು ನಿನಗೆ ಕೊಡಲು ಬಂದಿದ್ದೇನೆ ,ಈ ಹುಡುಗ  ದೇವವ್ರತ ನಮ್ಮ ಮಗ . ಇವನು ಮಹರ್ಷಿ ವಶಿಷ್ಠರ ಬಳಿ ವೇದ ಮತ್ತು ಶಾಸ್ತ್ರಗಳುನ್ನು  ಬಲ್ಲನು . ಮತ್ತು ಗುರು ಪರಶುರಾಮರ ಬಳಿ ಯುದ್ಧ ಕಲೆಗಳನ್ನು ಬಲ್ಲನು . ಎಂದು ಗಂಗಾ ಮಾಯವಾದಳು 

Comments

Popular posts from this blog

ಪ್ರವಾಸದ ನೆನಪುಗಳು - ಸಂಚಿಕೆ 1

ಮಹಾಭಾರತ- ಆದಿ ಪರ್ವ

ಶ್ರೀ ಕ್ಷೇತ್ರ ಗೋಕರ್ಣ ಚರಿತ್ರೆ