ಗಂಡ ಮತ್ತು ಹೆಂಡತಿಯಲ್ಲಿ ಯಾರು ಶ್ರೇಷ್ಠ ?

ಗಂಡ ಮತ್ತು ಹೆಂಡತಿಯಲ್ಲಿ ಯಾರು ಶ್ರೇಷ್ಠ ?

ಗಂಡ ಮತ್ತು ಹೆಂಡತಿ ರೈಲ್ವೆ ಹಳಿಗಳು ಇದ್ದಂತೆ. ಜೀವನ ಎನ್ನೋ ರೈಲು ಗಾಡಿ ಎರಡು ಹಳಿಗಳ ಮೇಲೆ ಸರಿಯಾಗಿ ಓಡುತ್ತೇ ವಿನಃ ಒಂದೇ ಹಾಲಿ ಮೇಲಲ್ಲ. ಈ ಸತ್ಯ ತಿಳಿದರೂ ಕೆಲವೊಮ್ಮೆ ಈ ಸಂದೇಹ ಬರೋದು ಸತ್ಯ. ಎರಡು ಹಳಿಗಲ್ಲಿಯೂ ಯಾವ ಹಳಿ ಶ್ರೇಷ್ಠ?  ಈಗಿನ ಕಾಲದಲ್ಲಿ ಇಬ್ಬರೂ ಸರಿ ಸಮಾನರು ಅನ್ನೋದೇ ಮಿತ ಹಿತವಾದ ವಾದ. ಈ ಲೇಖನ ಇಬ್ಬರ ಶ್ರೇಷ್ಠತೆಯನ್ನು ತೂಗಿ ಅಳೆಯುವ ಒಂದು ಪ್ರಯತ್ನ ಮಾಡಿದೆ.

ದೇವಿ ಅಪರಾಧ ಕ್ಷಮಾ ಸ್ತೋತ್ರದಲ್ಲಿ ಶ್ರೀ ಶಂಕರರು ಪಾರ್ವತಿ ದೇವಿಯ ಮಹಿಮೆ ಹೇಳುವಾಗ ಈ ಕೆಳಗಿನ ಶ್ಲೋಕ ಹೆಂಡತಿಯೇ ಸರ್ವಸ್ವ ಎಂದು ಹೇಳುತ್ತಾರೆ. "ಚಿತಾಭಸ್ಮಾಲೇಪೋ ಗರಲಮಶನಂ ದಿಕ್ಪಟಧರೋ ಜಟಾಧಾರೀ ಕಂಠೇ ಭುಜಗಪತಿಹಾರೀ ಪಶುಪತಿಃ । ಕಪಾಲೀ ಭೂತೇಶೋ ಭಜತಿ ಜಗದೀಶೈಕಪದವೀಂ ಭವಾನಿ ತ್ವತ್ಪಾಣಿಗ್ರಹಣಪರಿಪಾಟೀಫಲಮಿದಮ್" . ಇದರ ಅರ್ಥ ಶಿವನು ಸ್ಮಶಾನ ವಾಸನು, ಚಿತೆಯ ಭಸ್ಮ ಲೇಪಿಸಿ ಕೊಂಡವನು, ಮೈಗೆ ಒಂದು ಸಣ್ಣ ವಸ್ತ್ರ ಸುತ್ತಿಕೊಂಡು, ಹಾವನ್ನು ಕೊರಳಿಗೆ ಧರಿಸಿಕೊಂಡು , ಕೈಯಲ್ಲಿ ಕಪಾಲ (ತಲೆ ಬುರುಡೆ) ಹಿಡಿದುಕೊಂಡು ಓಡಾಡುವವನು. ನೀನು ಹೀಗೆ ಇದ್ದೂ ನಿನ್ನನು ಜಗದೀಶ್ವರ(ಜಗತ್ತಿಗೆ ದೊರೆ) ಎಂದು ಜಗತ್ತು ಕೊಂಡಾಡಲು "ಪಾರ್ವತಿಯನ್ನು ಮದುವೆ ಆಗಿದ್ದೇ"ಕಾರಣ.  ಪಾರ್ವತಿಯನ್ನು ಮದುವೆಯಾಗದೆ ಹೋದರೆ ನಿನ್ನ ಜೀವನಕ್ಕೆ ಏನೂ ಬೆಲೆಯೇ ಇರುತ್ತಿರಲಿಲ್ಲ.

ಇನ್ನು ದೇವ ದೇವಿಯರ ಹೆಸರು ಹೇಳುವಾಗ ಹೆಂಡತಿಯ ಹೆಸರೇ ಮೊದಲು ಆಮೇಲೆ ಗಂಡನ ಹೆಸರು. ಉಮಾ ಮಹೇಶ್ವರ, ಲಕ್ಷ್ಮಿ ನರಸಿಂಹ , ಲಕ್ಷ್ಮಿ ನಾರಾಯಣ ಇತ್ಯಾದಿ. ವೇದ ಕಾಲದಿಂದಲೂ ಹೆಂಡತಿಗೆ ಸಮಾಜ ಮತ್ತು ವೇದಗಳು ತುಂಬಾ ಮಹತ್ವವನ್ನು ಕೊಟ್ಟಿದೆ.

ಶ್ರೀ ಕೆ. ಎಸ್ . ನರಸಿಂಹ ಸ್ವಾಮಿ ಯವರು ಬರೆದ ಒಂದು ಕವನ ಹೆಂಡತಿಯ ಗುಣಗಾನವನ್ನು ಮಾಡುತ್ತಿದೆ. ಆ ಕವನ ಹೇಳುವ ಹಾಗೆ ಗಂಡನ ಹಿಂದಿನ ಶಕ್ತಿ ಹೆಂಡತಿಯೇ ಮತ್ತು ಹೆಂಡತಿ ಗಂಡನನ್ನು ತನ್ನ ಒಲವು , ಪ್ರೇಮ, ತ್ಯಾಗದಿಂದ ತನ್ನ ಅಂಕೆಯಲ್ಲಿ ಇಟ್ಟುಕೊಳ್ಳುವ ಶಕ್ತಿ ಹೊಂದಿರುತ್ತಾಳೆ.

ಮನೆಯೊಳಗಿದ್ದರೆ
ನನಗದೆ ಕೋಟಿ ರುಪಾಯಿ |
ಹೆಂಡತಿಯೊಬ್ಬಳು ಹತ್ತಿರವಿದ್ದರೆ
ನಾನೂ ಒಬ್ಬ ಸಿಪಾಯಿ ||


ಈ ಕೆಳಗಿನ ಸಾಲುಗಳು ಗಂಡ ಹೆಂಡತಿ ಜೊತೆ ಇದ್ದರೆ ಆ ಮನೆಯಲ್ಲಿ ದಿನವೂ ದೀಪಾವಳಿ ಹಬ್ಬದ ಸಡಗರವೇ ಸರಿ. ಅವಳು ಊರಿಗೆ ಹೊರಡುವೆ ಎಂದರೆ ಕೆಲವು ಗಂಡಸರು ನಮಗೆ ಕೆಲವು ದಿನಗಳ ಸ್ವಾತಂತ್ರ್ಯ ಸಿಕ್ಕಿತು ಎಂದು ಖುಷಿಯಾಗುವರು. ಕೆಲವರು ಹೆಂಡತಿ ತವರಿಗೆ ಹೋದರೆ, ನಿದ್ದೆ ಚೆನ್ನಾಗಿ ಮಾಡುತ್ತೇವೆ ಎನ್ನುವರು , ಇನ್ನು ಕೆಲವರು ಇನ್ನಷ್ಟು ಆಫೀಸ್ ಕೆಲಸ ಮಾಡುವೆವು ಎಂದರೂ ಕೂಡ, ಒಳಮನಸ್ಸು ಅವಳು ಯಾವಾಗ ವಾಪಸ ಬರುವಳೋ ಎಂದು ತಪತಪಿಸುತ್ತಿರುತ್ತದೆ ಎನ್ನುವುದಂತೂ ಸತ್ಯ.


ಹೆಂಡತಿಯೊಬ್ಬಳು ಮನೆಯೊಳಗಿದ್ದರೆ
ಹುಣ್ಣಿಮೆ, ಹೋಳಿಗೆ ದೀಪ |
ಹೆಂಡತಿ ತವರಿಗೆ ಹೊರಡುವೆನೆಂದರೆ
ನನಗಿಲ್ಲದ ಕೋಪ ||

ಗಂಡ ಎಂದರೆ ಪರದೈವ ಎಂದು ಹಿರಿಯರು ಹೇಳಿದರು. ಹೆಣ್ಣಿಗೆ






Comments

Popular posts from this blog

ಪ್ರವಾಸದ ನೆನಪುಗಳು - ಸಂಚಿಕೆ 1

ಮಹಾಭಾರತ- ಆದಿ ಪರ್ವ

ಶ್ರೀ ಕ್ಷೇತ್ರ ಗೋಕರ್ಣ ಚರಿತ್ರೆ