ಪ್ರೇಮ ವಿವಾಹ - ಕಥೆ ಮತ್ತು ವ್ಯಥೆ
ಪ್ರೇಮ ವಿವಾಹ - ಕಥೆ ಮತ್ತು ವ್ಯಥೆ
ನನಗೆ ಬೇಕಾಗಿತ್ತು ನಿನ್ನಂಥ ಸಂಗಾತಿ
ಕವಿಯು ಪ್ರೇಮ ಕಥೆಯ ಸುಂದರ ಮತ್ತು ದುರಂತವನ್ನು ಹೆಣ್ಣಿನ ದೃಷ್ಟಿಯಿಂದ ತಿಳಿಸಲು ಪ್ರಯತ್ನಿಸಿದ್ದಾನೆ. ದೂರದ ಬೆಟ್ಟ ನುಣ್ಣಗೆ ಎನ್ನುವಂತೆ ಎಲ್ಲಾ ಪ್ರೇಮ ವಿವಾಹಗಳು ಸುಂದರವಾಗಿರುವುದಿಲ್ಲ. ಹುಡುಗ-ಹುಡುಗಿ ತುಂಬಾ ಸಮಯ ಮದುವೆಯ ಮೊದಲು ಅಥವಾ ನಂತರ ಜೊತೆಗೆ ಕಳೆದರೂ, ಸಮಯ ಕಳೆದಂತೆ ನಾನಾ ತರಹದ ಸಮಸ್ಯೆಗಳು ಜೀವನ ಪಯಣವನ್ನೇ ಬದಲಿಸುತ್ತವೆ. ಇದು ಯಾರೋ ಒಬ್ಬರ ಜೀವನ ಕಥೆ ಅಲ್ಲ. ಹಲವಾರು ಓದಿದ ಕಥೆಗಳು, ಕೋರ್ಟ್ ಕಚೇರಿಯಲ್ಲಿ ನಡೆದ ಹಲವಾರು ವಿಚ್ಛೇದನದ ತಗಾದೆಗಳು ನನಗೆ ಈ ಕವನ ಬರೆಯಲು ಪ್ರೇರಣೆ.
ಅದೇನೋ ನೆನಪಿಲ್ಲ ಮನಸ್ಸಿಗೆ
ನಾ ಎಂದು ಸೋತೆ ನಿನ್ನ ಪ್ರೀತಿಗೆ
ಆ ನಿನ್ನ ಪ್ರೇಮದ ಮೊದಲ ನೋಟ
ವೇಗಗೊಳಿಸಿತು ಹೃದಯದ ಓಟ
ನಾ ಅಂದುಕೊಂಡೆ ಪ್ರೇಮ ಕುರುಡು
ನೀ ಕಳೆಯುವೆ ನನ್ನ ಬಾಳಿನ ಬರಡು
ನನ್ನ ಹಿಂದೆ ಹಿಂದೆ ನೀ ಬಂದಾಗ
ಅದೇನೋ ಸಂತಸ ಸನಿಹ ಬಂದಾಗ
ನನಗೆ ಬೇಕಾಗಿತ್ತು ನಿನ್ನಂಥ ಸಂಗಾತಿ
ಸದಾ ಪಾಲಿಸುವೆ ನನ್ನೆಲ್ಲಾ ಆಣತಿ
ಕೈ ಕೊಡಲಾರೆ ಎಂದೂ ಜೀವನದಲ್ಲಿ
ನನ್ನ ನೆರಳಾಗಿರುವೆ ಸದಾ ಮನದಲ್ಲಿ
ಕೈ ಕೊಡಲಾರೆ ಎಂದೂ ಜೀವನದಲ್ಲಿ
ನನ್ನ ನೆರಳಾಗಿರುವೆ ಸದಾ ಮನದಲ್ಲಿ
ಮನೆಯವರ ಒಪ್ಪಿಸಲು ಪಟ್ಟ ಕಷ್ಟ ಅದೆಷ್ಟು
ಮದುವೆ ಮಾಡಿಕೊಂಡಾಗ ಸಂತಸ ಹೇಳದಷ್ಟು
ಮದುವೆ ಮಾಡಿಕೊಂಡಾಗ ಸಂತಸ ಹೇಳದಷ್ಟು
ಏನೋ ಸಾಧಿಸಿದೆ ಅನ್ನೋ ಹಮ್ಮು ನನ್ನೊಳಗೆ
ವಿಧಿಗೂ ಸೆಡ್ಡು ಹೊಡೆದೆ ಅನ್ನೋ ಗತ್ತಿನೊಳಗೆ
ಜೀವನ ಸಾಗಿತ್ತು ಅತಿ ಸುಂದರವಾಗಿ
ಇಬ್ಬರೂ ದುಡಿಯುತ್ತಿದೆವು ಜೊತೆ ಜೊತೆಯಾಗಿ
ಮನೆಯ ತುಂಬಾ ತುಂಬಿತು ವಸ್ತುಗಳು
ಅತಿ ವಿಲಾಸಿ ಜೀವನದ ಅನಗತ್ಯಗಳು
ಅತ್ತೆ ಮಾವ ನಾದಿನಿಯರ ಕಾಟ ಎನಗಿಲ್ಲ
ಅಂದುಕೊಂಡೆ ನನ್ನಂಥ ಸುಖಿ ಯಾರಿಲ್ಲ
ಯಜಮಾನಿಯಾಗಿ ನಡೆಸುತಿದ್ದೆ ಮನೆಯನ್ನು
ಗಂಡ ಕೇಳುತಿದ್ದ ನನ್ನ ಎಲ್ಲಾ ಮಾತನ್ನು
ವಿರಸ ಸುಳಿಯಿತು ಹೇಗೋ ನಮ್ಮ ನಡುವೆ
ಸಂಶಯ ಹೆಮ್ಮರವಾಯಿತು ಅದೇಗೋ ನಡುವೆ
ಚೂರು ಚೂರಾಯಿತು ಪ್ರೀತಿ ಎಂಬ ಹವೆ
ಅಗಲವಾಯಿತು ಅವಿಶ್ವಾಸದ ಕಾಲುವೆ
ವಾತಾವರಣಕ್ಕೆ ಬದಲಾಗಲಿಲ್ಲ "ನಾನು"
ಹಮ್ಮು ಬಿಡಲಾರದೆ ಹೋದೆನು "ನಾನು"
ಉದ್ಯೋಗದ ಮೋಹ ತಲೆಗೇರಿತು
ಅವನಿಲ್ಲದೆ ಬದುಕಬಲ್ಲೆ ಎಂದೆನಿಸಿತು
ಅಂದೇ ನಾ ತೊರೆದೆ ಗಂಡನ ಮನೆ
ಬಂದು ಸೇರಿದೆ ತವರು ಮನೆ
ಹೆತ್ತವರು ಹೋಗೆಂದು ಒತ್ತಾಯಿಸಲಿಲ್ಲ
ದಾಂಪತ್ಯ ಜೋಡಿಸಲು ಪ್ರಯತ್ನಿಸಲಿಲ್ಲ
ನಾನು ಕೊನೆಗೂ ಹಠ ಸಾಧಿಸಿದೆ
ಉದ್ಯೋಗದಲ್ಲಿ ಮತ್ತೆ ಮೆರೆದೆ
ಬರಿ ಹಣವೊಂದೇ ಜೀವನ ಎಂದೆ
ಬೇರೆ ಮನೆ ಮಾಡಿ ಬದುಕುವೆ ಅಂದೆ
ಹೆತ್ತವರ ಒಳ ಮನಸ್ಸು ನಾ ಅರಿಯಲಾರೆನೇ
ಒಳಗೊಳಗೇ ಅಳುವುದ ತಿಳಿಯಲಾರೆನೇ
ಹೊರಗೆ ಸುಮ್ಮನೆ ನಗುವುದನ್ನು ನೋಡಲಾರೆನೇ
ಅರೆ ಇಂದೇಕೋ ಮನಸು ತಳಮಳಿಸಿದೆ
ಹಳೆ ಸಿಹಿ ಜೀವನ ಮತ್ತೆ ನೆನಪಾಗಿದೆ
ಮತ್ತೆ ಒಂದಾಗಲು ಮನ ಬಯಸಿದೆ
ಒಣ ಜಂಭ ನನ್ನ ಹಾಗೆ ತಡೆ ಹಿಡಿದಿದೆ
ಇಂದಿನ ದಿನ ನಾಳೆ ಇರದು ಅಂತೆ
ಮನಸು ಬದಲಾಗದೆ ಇರಲಾರದಂತೆ
ಜೀವನ ಮತ್ತೆ ಒಂದಾಗಬಹುದಂತೆ
ಇಂದು ನಾ ಕಂಡ ಕನಸು ನನಸಾಗಬಹುದಂತೆ
ದಿಲೀಪ್ ದೀಕ್ಷಿತ್
ವಿಧಿಗೂ ಸೆಡ್ಡು ಹೊಡೆದೆ ಅನ್ನೋ ಗತ್ತಿನೊಳಗೆ
ಜೀವನ ಸಾಗಿತ್ತು ಅತಿ ಸುಂದರವಾಗಿ
ಇಬ್ಬರೂ ದುಡಿಯುತ್ತಿದೆವು ಜೊತೆ ಜೊತೆಯಾಗಿ
ಮನೆಯ ತುಂಬಾ ತುಂಬಿತು ವಸ್ತುಗಳು
ಅತಿ ವಿಲಾಸಿ ಜೀವನದ ಅನಗತ್ಯಗಳು
ಅತ್ತೆ ಮಾವ ನಾದಿನಿಯರ ಕಾಟ ಎನಗಿಲ್ಲ
ಅಂದುಕೊಂಡೆ ನನ್ನಂಥ ಸುಖಿ ಯಾರಿಲ್ಲ
ಯಜಮಾನಿಯಾಗಿ ನಡೆಸುತಿದ್ದೆ ಮನೆಯನ್ನು
ಗಂಡ ಕೇಳುತಿದ್ದ ನನ್ನ ಎಲ್ಲಾ ಮಾತನ್ನು
ವಿರಸ ಸುಳಿಯಿತು ಹೇಗೋ ನಮ್ಮ ನಡುವೆ
ಸಂಶಯ ಹೆಮ್ಮರವಾಯಿತು ಅದೇಗೋ ನಡುವೆ
ಚೂರು ಚೂರಾಯಿತು ಪ್ರೀತಿ ಎಂಬ ಹವೆ
ಅಗಲವಾಯಿತು ಅವಿಶ್ವಾಸದ ಕಾಲುವೆ
ವಾತಾವರಣಕ್ಕೆ ಬದಲಾಗಲಿಲ್ಲ "ನಾನು"
ಹಮ್ಮು ಬಿಡಲಾರದೆ ಹೋದೆನು "ನಾನು"
ಉದ್ಯೋಗದ ಮೋಹ ತಲೆಗೇರಿತು
ಅವನಿಲ್ಲದೆ ಬದುಕಬಲ್ಲೆ ಎಂದೆನಿಸಿತು
ಅಂದೇ ನಾ ತೊರೆದೆ ಗಂಡನ ಮನೆ
ಬಂದು ಸೇರಿದೆ ತವರು ಮನೆ
ಹೆತ್ತವರು ಹೋಗೆಂದು ಒತ್ತಾಯಿಸಲಿಲ್ಲ
ದಾಂಪತ್ಯ ಜೋಡಿಸಲು ಪ್ರಯತ್ನಿಸಲಿಲ್ಲ
ನಾನು ಕೊನೆಗೂ ಹಠ ಸಾಧಿಸಿದೆ
ಉದ್ಯೋಗದಲ್ಲಿ ಮತ್ತೆ ಮೆರೆದೆ
ಬರಿ ಹಣವೊಂದೇ ಜೀವನ ಎಂದೆ
ಬೇರೆ ಮನೆ ಮಾಡಿ ಬದುಕುವೆ ಅಂದೆ
ಹೆತ್ತವರ ಒಳ ಮನಸ್ಸು ನಾ ಅರಿಯಲಾರೆನೇ
ಒಳಗೊಳಗೇ ಅಳುವುದ ತಿಳಿಯಲಾರೆನೇ
ಹೊರಗೆ ಸುಮ್ಮನೆ ನಗುವುದನ್ನು ನೋಡಲಾರೆನೇ
ಅರೆ ಇಂದೇಕೋ ಮನಸು ತಳಮಳಿಸಿದೆ
ಹಳೆ ಸಿಹಿ ಜೀವನ ಮತ್ತೆ ನೆನಪಾಗಿದೆ
ಮತ್ತೆ ಒಂದಾಗಲು ಮನ ಬಯಸಿದೆ
ಒಣ ಜಂಭ ನನ್ನ ಹಾಗೆ ತಡೆ ಹಿಡಿದಿದೆ
ಇಂದಿನ ದಿನ ನಾಳೆ ಇರದು ಅಂತೆ
ಮನಸು ಬದಲಾಗದೆ ಇರಲಾರದಂತೆ
ಜೀವನ ಮತ್ತೆ ಒಂದಾಗಬಹುದಂತೆ
ಇಂದು ನಾ ಕಂಡ ಕನಸು ನನಸಾಗಬಹುದಂತೆ
ದಿಲೀಪ್ ದೀಕ್ಷಿತ್
Comments
Post a Comment