ಶಂಕರ ಜಯಂತಿಯ ಪ್ರಯುಕ್ತ ಶಂಕರಾಚಾರ್ಯರಿಗೊಂದು ನಮನ

ಜನಿಸಿದರು ಕೇರಳದ ಕಾಲಡಿಯಲ್ಲಿ
ಪರಿಕ್ರಮಿಸಿದರು ಅಖಂಡ ಭಾರತ ಬರಿಕಾಲಲ್ಲಿ
ಸ್ಥಾಪಿಸಿದರು ಹಿಂದೂ ಧರ್ಮದ ಮಠಗಳನ್ನು
ಜನರಿಗೆ ತೋರಿಸಿದರು ಧರ್ಮ ಮಾರ್ಗವನ್ನು
 
ಉತ್ತರದಲ್ಲಿ ಅಥರ್ವವೇದ ಜೋಷಿಮಠ
ದಕ್ಷಿಣದಲ್ಲಿ ಯಜುರ್ವೇದ ಶೃಂಗೇರಿ ಮಠ
ಪಡುವಣದಲ್ಲಿ ಸಾಮವೇದ ದ್ವಾರಕಾ ಮಠ
ಮೂಡಣದಲ್ಲಿ ಋಗ್ವೇದ ಗೋವರ್ಧನ ಮಠ

ನಾಲ್ಕು ವೇದಗಳ ಸಾರ ತಿಳಿ ಹೇಳಿದರು
ಕನಕಧಾರಾ ಸ್ತೋತ್ರ ಪಠಿಸಿದರು
ಕಾಶಿಯ ಅನ್ನಪೂರ್ಣೆಯ ಸ್ತುತಿಸಿದರು
ಹಸಿವು ಬಡತನ ನೀಗುವ ದಾರಿ ತೋರಿದರು

ಮೂವತ್ತೆರಡೇ ವರುಷ ಬದುಕಿದರು
ಅದೆಂಥ ಪವಾಡ ತೋರಿಸಿದರು
ಕಾಶ್ಮೀರದಲ್ಲಿ ದೈವಜ್ಞ ಪೀಠ ಏರಿದರು
ಆಚಾರ್ಯ ಪದವಿ ಗಳಿಸಿದರು

ಮಂಡನಮಿಶ್ರಿ ಜೊತೆ ವಾದಿಸಿದರು
ಭಾರತಿಯ ವಾದ ಆಲಿಸಿದರು
ಕಾಶಿ ರಾಜನ ದೇಹ ಸೇರಿದರು
ಲೌಕಿಕ ಜೀವನ ಅಧ್ಯಯಿಸಿದರು
ಮತ್ತೆ ಭಾರತೀ ಜೊತೆ ವಾದಿಸಿ ಜಯಿಸಿದರು

ಜಗತ್ತಿನ ಪರಮ ಗುರು ಎಂದೆನಿಸಿದರು
ಉತ್ತರದ ಕೇದಾರದಲ್ಲಿ ಅದೃಶ್ಯರಾದರು
ಈ ಮನುಕುಲವ ಉದ್ಧರಿಸಿದರು
ಅದ್ವೈತ ಸಂಪ್ರದಾಯಕ್ಕೆ ನಾಂದಿ ಹಾಡಿದರು

 -ದಿಲೀಪ್ ದೀಕ್ಷಿತ್ 

Comments