ನನ್ನ ಕನಸಿನ ಗೋವಾ
ನನಗೊಂದು ಕನಸಿತ್ತು ನೋಡ್ಬೇಕು ಒಮ್ಮೆ ಗೋವಾ
ಆಸ್ವಾದಿಸಬೇಕು ಆ ಹೊಸ ದುನಿಯಾದ ಹವಾ
ಕನಸು ನನಸಾಗೋ ಸಮಯ ಬಂತು
ಹತ್ತು ವರುಷದ ದಾಂಪತ್ಯ ಸಂದಿತು
ಅಕೋ ನೋಡಲ್ಲಿ ಗೋವಾ ಬಂದಿತು
ಹತ್ತು ವರುಷದ ದಾಂಪತ್ಯ ಸಂದಿತು
ಅಕೋ ನೋಡಲ್ಲಿ ಗೋವಾ ಬಂದಿತು
ಕಣ್ಣು ಹಾಯಿಸಿದಷ್ಟು ತೀರ ಕಾಣದ ಕಡಲು
ಅದರಲ್ಲಿ ವಿರಹಿಸಿದರೂ ಮುಟ್ಟಿಲ್ಲ ಆಸೆಯ ಮುಗಿಲು
ಆ ಸೊಬಗು ನೋಡಿದಷ್ಟುಇನ್ನೂ ಮುಗಿಯಲಾರದ ದಿಗಿಲು
ಎಲ್ಲಿ ನೋಡಿದರಲ್ಲಿ ವಿಹಂಗಮ ಬೀಚು
ಮದ್ಯ ಮಾನಿನಿಯರ ಸಂಗಮದ ಬೀಚು
ಈ ಲೋಕ ಮರೆತ ಪ್ರವಾಸಿಗರ ಬೀಚು
ಮಗನಿಗೆ ಕೂತೂಹಲ ವಿದೇಶಿಗರನ್ನು ನೋಡಲು
ಆ ಸೊಬಗು ನೋಡಿದಷ್ಟುಇನ್ನೂ ಮುಗಿಯಲಾರದ ದಿಗಿಲು
ಎಲ್ಲಿ ನೋಡಿದರಲ್ಲಿ ವಿಹಂಗಮ ಬೀಚು
ಮದ್ಯ ಮಾನಿನಿಯರ ಸಂಗಮದ ಬೀಚು
ಈ ಲೋಕ ಮರೆತ ಪ್ರವಾಸಿಗರ ಬೀಚು
ಮಗನಿಗೆ ಕೂತೂಹಲ ವಿದೇಶಿಗರನ್ನು ನೋಡಲು
ನಮಗಾಯಿತು ಸಂಕೋಚ ಮಗ ಅವರನ್ನುಕಾಣಲು
ಮಗನೆಲ್ಲಿ ಕೇಳುವನು ವಿಚಿತ್ರ ಪ್ರಶ್ನೆಗಳನ್ನು
ಹೇಗೆ ಹೇಳಲಿ ಅದಕ್ಕೆ ತಕ್ಕ ಉತ್ತರಗಳನ್ನು !!
ಎಲ್ಲರಿಗೂ ತಾನೇ ತರುಣ-ತರುಣಿ ಎಂಬ ಗುಂಗು
ಬಟ್ಟೆ ವಯಸ್ಸಿಗಿಲ್ಲ ಯಾವುದೇ ಹಂಗು
ಅದಕ್ಕೆ ಅಲ್ಲಿ ಜೀವನದಲ್ಲಿ ತುಂಬಿದೆ ಎಲ್ಲಾ ರಂಗು
ಚರ್ಚು ದೇವಸ್ಥಾನ ಕೈ ಬೀಸಿ ಕರೆಯಿತು
ಕೋಟೆ ಕೊತ್ತಲ ಸಮುದ್ರ ನೋಟವ ತೋರಿಸಿತು
ಆ ಸೌಂದರ್ಯ ನನ್ನ ತನು-ಮನ ತಣಿಸಿತು
ಮದ್ಯ ಪ್ರಿಯರಿಗೆ ಹೇಳಿಮಾಡಿಸಿದ ಊರು
ಸಮುದ್ರ ಖಾದ್ಯ ಪ್ರಿಯರಿಗೆ ಪ್ರಿಯವಾದ ಊರು
ಕ್ಯಾಸಿನೊ ಪ್ರಿಯರಿಗೆ ಕೈ ಬೀಸಿ ಕರೆಯುವ ಊರು
ಯುವ ಪ್ರೇಮಿಗಳಿಗೆ ನಿರಂತರ ಸ್ವರ್ಗ ಲೋಕ
ಹೊಸ ಜೋಡಿಗೆ ಮಧುಚಂದ್ರ ತೋರಿಸೋ ನಾಕ
ತರುಣಿಯರಿಗೆ ವಯಸ್ಸು ಮರೆಯುವ ಸುಂದರ ಲೋಕ
ಕಾಣುತ್ತಿರುವೆ ಮತ್ತೆ ಅದೇ ಸುಂದರ ಕನಸು
ಗೋವಾ ನೋಡಿದಾಗ ಪೂರ್ಣಗೊಳ್ಳುವುದು ನನಸು
ಬೇಡುವೆನು ದೇವರೇ ಅಲ್ಲಿಯವರೆಗೆ ಬದುಕಲು ಹರಸು
ಎಲ್ಲರಿಗೂ ತಾನೇ ತರುಣ-ತರುಣಿ ಎಂಬ ಗುಂಗು
ಬಟ್ಟೆ ವಯಸ್ಸಿಗಿಲ್ಲ ಯಾವುದೇ ಹಂಗು
ಅದಕ್ಕೆ ಅಲ್ಲಿ ಜೀವನದಲ್ಲಿ ತುಂಬಿದೆ ಎಲ್ಲಾ ರಂಗು
ಚರ್ಚು ದೇವಸ್ಥಾನ ಕೈ ಬೀಸಿ ಕರೆಯಿತು
ಕೋಟೆ ಕೊತ್ತಲ ಸಮುದ್ರ ನೋಟವ ತೋರಿಸಿತು
ಆ ಸೌಂದರ್ಯ ನನ್ನ ತನು-ಮನ ತಣಿಸಿತು
ಮದ್ಯ ಪ್ರಿಯರಿಗೆ ಹೇಳಿಮಾಡಿಸಿದ ಊರು
ಸಮುದ್ರ ಖಾದ್ಯ ಪ್ರಿಯರಿಗೆ ಪ್ರಿಯವಾದ ಊರು
ಕ್ಯಾಸಿನೊ ಪ್ರಿಯರಿಗೆ ಕೈ ಬೀಸಿ ಕರೆಯುವ ಊರು
ಯುವ ಪ್ರೇಮಿಗಳಿಗೆ ನಿರಂತರ ಸ್ವರ್ಗ ಲೋಕ
ಹೊಸ ಜೋಡಿಗೆ ಮಧುಚಂದ್ರ ತೋರಿಸೋ ನಾಕ
ತರುಣಿಯರಿಗೆ ವಯಸ್ಸು ಮರೆಯುವ ಸುಂದರ ಲೋಕ
ಕಾಣುತ್ತಿರುವೆ ಮತ್ತೆ ಅದೇ ಸುಂದರ ಕನಸು
ಗೋವಾ ನೋಡಿದಾಗ ಪೂರ್ಣಗೊಳ್ಳುವುದು ನನಸು
ಬೇಡುವೆನು ದೇವರೇ ಅಲ್ಲಿಯವರೆಗೆ ಬದುಕಲು ಹರಸು
Comments
Post a Comment