ಟಿವಿ ನೋಡೋ ಹುಚ್ಚು
ಟಿವಿ ನೋಡೋ ಹುಚ್ಚು : PART - A
ಈಗಂತೂ ಟಿವಿ ಪ್ರತಿ ಮನೆಯಲ್ಲಿ ಒಂದು ಅತ್ಯವಶ್ಯಕವಾದ ವಸ್ತುವಾಗಿದೆ. ಅದು ಇಲ್ಲದೆ ಕಿರಿಯರಿಂದ ಹಿಡಿದು ಹಿರಿಯರ ತನಕ ಸಮಯವೇ ಕಳೆಯಲ್ಲ. ಟಿವಿ ಮುಂದೆ ಕುಳಿತರೆ ಬೇರೇನೂ ಬೇಡ...!!
ಒಂದು ದಿನ ನನ್ನ ಹೆಂಡತಿಯ ಜೊತೆ ಮಾತನಾಡುವಾಗ , ನಾನು ಈ ಚಲನಚಿತ್ರದ ಹಾಡು ಸಣ್ಣವನಿದ್ದಾಗ ನೋಡಿದ್ದೇನೆ ಎಂದೆ. ಅವಳ ಪ್ರಶ್ನೆ ನಿಮ್ಮ ಮನೆಯಲ್ಲಿ ಟಿವಿ ಇರಲಿಲ್ಲ ಮತ್ತೆ ಚಲನಚಿತ್ರ, ಕ್ರಿಕೆಟ್ ನೋಡಿದ್ದೇನೆ ಎನ್ನುತ್ತೀರಿ, ಅದು ಹೇಗೆ ಸಾಧ್ಯ.. ಈ ಪ್ರಶ್ನೆ ನನ್ನ ಹಳೆ ನೆನಪು ಮತ್ತೆ ಕೆದಕಿತು, ಮತ್ತು ನನ್ನ ಹಳೆ ನೆನಪನ್ನು ನಿಮ್ಮ ಜೊತೆ ಹಂಚಿಕೊಳ್ಳುವಂತೆ ಪ್ರೇರೇಪಿಸಿತು. ಚಿಕ್ಕವನಿದ್ದಾಗ ಟಿವಿ ನೋಡಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ.
ಬಾಲ್ಯದಿಂದ ರೇಡಿಯೋ ನನ್ನ ಆತ್ಮೀಯ ಗೆಳೆಯ. ಕ್ರಿಕೆಟ್ ಕಾಮೆಂಟರಿ ಕೇಳೋ ಗೀಳು ಹತ್ತಿದ್ದೇ ಇದರಿಂದ. ಈಗಲೂ ನನಗೆ ಕ್ರಿಕೆಟ್ ನೋಡೋದಕ್ಕಿಂತ ಕಾಮೆಂಟರಿ ಕೇಳೋದೇ ತುಂಬಾ ಇಷ್ಟ. ಭಾರತದ ಪಂದ್ಯಗಳು ಹೊರ ದೇಶದಲ್ಲಿ ಇದ್ದಾಗ , ಎಷ್ಟೋ ಚಾನೆಲ್ ಗಳನ್ನೂ ತಿರುಗಿಸಿ ತಿರುಗಿಸಿ ಎಲ್ಲಿಯಾದರೂ ಕಾಮೆಂಟರಿ ಬರುತ್ತಾ ಅಂತ ನೋಡುತಿದ್ದೆ. ತಂದೆಯವರ ಹತ್ತಿರ ಇಷ್ಟು ತಿರುಗಿಸಿದರೆ , ರೇಡಿಯೋ ಹಾಳಾಗುತ್ತೆ ಅಂತ ಹೇಳಿಸಿ ಕೊಂಡಿದ್ದು ಈಗಲೂ ನೆನಪು ಬರುತ್ತೆ. ಅವರಿಗೂ ನನ್ನ ಹಾಗೆ ಕ್ರಿಕೆಟ್ ಕೇಳೋದು ಅಂದರೆ ತುಂಬಾ ಇಷ್ಟ.
ನಮ್ಮ ಮನೆಯಲ್ಲಿ ಟಿವಿ ಬಂದದ್ದೇ ನಾನು ಇಂಜಿನಿಯರಿಂಗ್ ಮುಗಿಸಿದ ಮೇಲೆ. ನಾನು ಮೊದಲೇ ಹೇಳಿದಂತೆ ಕ್ರಿಕೆಟ್ ಅಂದರೆ ನನಗೆ ಪಂಚ ಪ್ರಾಣ, ಅದರಲ್ಲೂ ಟಿವಿಯಲ್ಲಿ ನೋಡಲು ಸಿಕ್ಕರೆ ಸ್ವರ್ಗ ಸಿಕ್ಕಂತೆ ಅನಿಸುತಿತ್ತು. ಎಷ್ಟೋ ಸಲ ಬೆಳಿಗ್ಗೆ ಮೂರು ಗಂಟೆಗೆ ಎದ್ದು ಕ್ರಿಕೆಟ್ ಪಂದ್ಯ ನೋಡುತ್ತಿದ್ದೆ. ನನ್ನ ಹೆಂಡತಿ ಎಷ್ಟೋ ಸಲ ಇವರು ಎಲ್ಲಿ ಹೋದರು ಅಂತ ಹುಡುಕಿದಾಗ ಟಿವಿ ಮುಂದೆ ಮ್ಯಾಚ್ ನೋಡುತ್ತಾ ಕುಳಿತದ್ದು ನೋಡಿ ಮ್ಯಾಚ್ ನೋಡೋ ಹುಚ್ಚು ಹಿಡಿದಿದೆ ಎನ್ನುತಿದ್ದಳು. ಈಗಲೂ ಆ ಹುಚ್ಚು ನನ್ನ ಬಿಟ್ಟಿಲ್ಲ.!! ಪಂದ್ಯ ಯಾವ ದೇಶದ್ದು ಆದರೂ ಸರಿ, ನೋಡೋದು ಬಿಡಲ್ಲ. ಎಷ್ಟೋ ಸಲ ಬೆಳಿಗ್ಗೆ ಮೂರೂವರೆಗೆ ಟೆಸ್ಟ್ ಪಂದ್ಯ ನೋಡಲು ಏಳುತ್ತಿದ್ದೆ..
ನಮ್ಮ ಹಳ್ಳಿಯಲ್ಲಿ ಕೆಲವೇ ಕೆಲವು ಮನೆಯಲ್ಲಿ ಟಿವಿ ಇತ್ತು. ಆ ಕಾಲದಲ್ಲಿ ಟಿವಿ ಇದ್ದವನೇ ಶ್ರೀಮಂತ , ಅದರಲ್ಲೂ ಟಿವಿ ಜೊತೆಗೆ ಡಿಶ್ ಹಾಕಿಸಿ ಕೊಂಡವನು ಆಗರ್ಭ ಶ್ರೀಮಂತನೇ ಸರಿ.
ಕ್ರಿಕೆಟ್ ಪಂದ್ಯ ಇರುವ ಮೊದಲ ದಿನ, ನಿಮ್ಮ ಮನೆಗೆ ನಾಳೆ ಪಂದ್ಯ ನೋಡಲು ಬರುತ್ತೇವೆ ಅಂತ ಹೇಳುತ್ತಿದ್ದೆವು. ಹಳ್ಳಿಯಲ್ಲಿ ಮನೆಗಳು ಇರೋದೇ ತುಂಬಾ ದೂರ. ಎರಡು ಮನೆಗಳು ಸ್ವಲ್ಪ ಹತ್ತಿರ ಇತ್ತು. ಒಂದು ಮಾರ್ಗದ ಮನೆ ಇನ್ನೊಂದು ಸುಮಂತನವರ ಮನೆ. ಈ ಮನೆಯವರು ನಮ್ಮ ಜೊತೆ ಕ್ರಿಕೆಟ್ ಆಡಲು ಬರುತ್ತಿದ್ದರಿಂದ, ಸಲುಗೆ ಚೆನ್ನಾಗಿಯೇ ಬೆಳೆದಿತ್ತು. ಒಂದು ಮನೆ ಒಂದೂವರೆ ಕಿಲೋಮೀಟರು ದೂರ, ಇನ್ನೊಂದು ಮನೆ ೨ ಕಿಲೋಮೀಟರು ದೂರ.
ಮೊದಲೇ ಹೇಳಿದಂತೆ ಪಂದ್ಯದ ಮೊದಲನೇ ದಿನವೇ(ರಜಾ ದಿನದ ಪಂದ್ಯ) ಎಲ್ಲರೂ ಸೇರಿ ಯಾರ ಮನೆಯಲ್ಲಿ ಪಂದ್ಯ ವೀಕ್ಷಣೆ ಮಾಡೋದು ಅಂತ ನಿರ್ಧರಿಸಿರುತ್ತಿದೆವು. ಪಂದ್ಯದ ದಿನ ಬೇಗ ಎದ್ದು ತಿಂಡಿ ತಿಂದು , ನಾನು ನನ್ನ ತಮ್ಮ (ನಮ್ಮ ಅಣ್ಣನಿಗೆ ಪಂದ್ಯ ನೋಡಲೇಬೇಕು ಅನ್ನುವ ಹುಮ್ಮಸ್ಸು ಇರಲಿಲ್ಲ). ಮಾರ್ಗದ ಮನೆ ಅಥವಾ ಹೆಬ್ಬಾರರ ಮನೆ ಮುಟ್ಟ ಬೇಕು ಎಂದರೆ ಗುಡ್ಡ ಹತ್ತಿ ಇಳಿಯಬೇಕು. ಕಾಡಿನ ನಡುವೆ ಹೋಗಬೇಕು. ಅವರ ಮನೆ ತಲುಪಿದ ಮೇಲೆ ನಮಗೆಲ್ಲ ತಿಂಡಿ ಚಹಾ ಕೊಡುತ್ತಿದ್ದರು...
ಪಂದ್ಯ ನೋಡುವಾಗ ಹಾಸ್ಯಕ್ಕೆ ಏನೂ ಕಮ್ಮಿ ಇರುತ್ತಿರಲಿಲ್ಲ. ಒಂದು ಸಲ ಪಂದ್ಯ ನೋಡುವಾಗ ಬ್ಯಾಟ್ಸಮನ್ ಒಂದು ಫೋರ್ ಹೊಡೆದ.. ಅದನ್ನೇ ಮತ್ತೆ ಮರುಪ್ರಸಾರ ಮಾಡಿದಾಗ, ಒಬ್ಬರು ಫೋರ್ ಮೇಲೆ ಫೋರ್ ಹೊಡೆದ ಅಂದರು.. ಅದು ಕೇಳಿ ಹೊಡೆದದ್ದೇ ಒಂದೇ ಫೋರ್, ಅದನ್ನೇ ಮತ್ತೆ ತೋರಿಸಿದ್ದಾರೆ ಅಂದಾಗ... ನಗುವೋ ನಗು.. . ಕ್ಯಾಚ್ ಬಿಟ್ಟಾಗ ಕ್ಷೇತ್ರರಕ್ಷಕ(fielder) ಗೆ ಬೈಗುಳ.. ರನ್ ಮಾಡಿಲ್ಲ ಅಂದರೆ .. ಬ್ಯಾಟ್ಸಮನ್ ಸುಮ್ಮನೆ ಅಡಿಕೆ ಹೆಕ್ಕಲಿಕ್ಕೆ ಬರಲಿ , ಸಗಣಿ ಸಾರಿಸಲಿ ಅಂತ ಬೈಗುಳ ... . ಒಮ್ಮೊಮ್ಮೆ ಅವರಿಗಿಂತ ನಾವೇ ಚೆನ್ನಾಗಿ ಆಡುತ್ತಿದ್ದೆವು ಅನ್ನೋ ಮಾತುಗಳು .. ಹರಟೆ ಎಲ್ಲವೂ ಇರುತ್ತಿತ್ತು.
ಕರೆಂಟ್ ಹಳ್ಳಿಯಲ್ಲಿ ಕಣ್ಣು ಮುಚ್ಚಾಲೆ ಆಡೋದು ಸಾಮಾನ್ಯ ಅದರಲ್ಲಿ ಅಂತೂ ಕ್ರಿಕೆಟ್ ಇದ್ದ ದಿನ ತುಂಬಾನೇ ಜಾಸ್ತಿ. ಪಂದ್ಯ ನೋಡುವಾಗ ಕರೆಂಟ್ ಹೋದರೆ ಸ್ವಲ್ಪ ಹೊತ್ತು ಕಾದು ಮನೆಗೆ ವಾಪಾಸ್ ಬರುತ್ತಿದ್ದೆವು. ಮನೆಗೆ ಬಂದಮೇಲೆ ಕರೆಂಟ್ ಬಂದರೆ ಮತ್ತೆ ಅವರ ಮನೆಗೆ ಓಡುತ್ತಿದ್ದೆವು. ದಿನಕ್ಕೆ ಏನಿಲ್ಲ ಎಂದರೂ ಎಂಟರಿಂದ ಹತ್ತು ಕಿಲೋಮೀಟರು ಪ್ರಯಾಣ ಆಗುತ್ತಿದ್ದು. ದೇಹಕ್ಕೆ ವ್ಯಾಯಾಮ.. ಮನಸ್ಸಿಗೆ ಹಿತ... ರಾತ್ರಿ ಸುಖವಾದ ನಿದ್ದೆ.
ಕ್ರಿಕೆಟ್ ನೋಡಲು ಏನೇನೂ ನಾಟಕ ಮಾಡುತ್ತಿದೆ. ಅದೇ ನಾಟಕ ನನಗೆ ಮುಳುವಾದದ್ದು ಇದೆ. ನಾನಾಗ ಏಳನೇ ತರಗತಿಯಲ್ಲಿ ಓದುತ್ತಿದ್ದೆ. ಪಂದ್ಯವಿದ್ದ ದಿನ ಆರೋಗ್ಯ ಸರಿ ಇಲ್ಲ ಅಂತ ನಾಟಕ ಮಾಡುತ್ತಿದ್ದೆ.. ಹೊಟ್ಟೆ ನೋವು.. ಎರಡು ಮೂರು ಸಲ ಸುಮ್ಮನೆ ಶೌಚಕ್ಕೆ ಹೋಗಿ ಬರುತ್ತಿದ್ದೆ. ಆಮೇಲೆ ತಂದೆಯವರು ಸರಿ, ಮನೆಯಲ್ಲೇ ಇರಲಿ ಅಂತ ಹೇಳಿದ ತಕ್ಷಣ ನನ್ನ ನಾಟಕ ಕೆಲಸ ಮಾಡಿತು ಅಂತ ಮನದೊಳಗೆ ಖುಷಿಯಾಗುತ್ತಿದ್ದೆ. ಒಂದೆರಡು ಗಂಟೆ ವಿಶ್ರಾಂತಿ ಮಾಡಿ, ಆರೋಗ್ಯ ಸರಿ ಹೋಯಿತು ಅಂತ ಪಂದ್ಯ ನೋಡಲು ಹೋಗುತ್ತಿದ್ದೆ. ಒಂದೆರಡು ಸಲ ಇದೆ ನಾಟಕ ಮಾಡಿದ ಮೇಲೆ , ನಮ್ಮ ತಂದೆ, ತಾಯಿಗೆ ಸಂದೇಹ ಬಂತು. ಆರೋಗ್ಯವೇಕೆ ಪಂದ್ಯದ ದಿನವೇ ಹಾಳುಗುತ್ತೆ ಅಂತ .. ನಾನು ಸತ್ಯ ಹೇಳಲೇ ಬೇಕಾಯಿತು .. ಅಂತೂ ನನ್ನ ನಾಟಕ ಅಂತ್ಯವಾಯಿತು.
೧೯೯೬, ಕ್ರಿಕೆಟ್ ವರ್ಲ್ಡ್ ಕಪ್ ನಡೀತಾ ಇತ್ತು. ನಮ್ಮ ಪ್ರೌಢ ಶಾಲೆ ಬಿಳಿನೆಲೆ, ಮನೆಯಿಂದ ಹದಿನೇಳು ಕಿಲೋಮೀಟರು ದೂರ. ಶಾಲೆಗೇ ಹೋದಾಗ ಪಂದ್ಯ ನೋಡೋದು ಹೇಗೆ? ಅದಕ್ಕೂ ಒಂದು ಉಪಾಯ ಮಾಡಿದೆವು. ನಮ್ಮ ಅಧ್ಯಾಪಕರ ಮನೆ, ಶಾಲೆಗೆ ತುಂಬಾ ಹತ್ತಿರ ಇತ್ತು. ಅವರಿಗೂ ಕ್ರಿಕೆಟ್ ಅಂದರೆ ಪಂಚ ಪ್ರಾಣ. ನಮ್ಮ ಶಾಲೆಯ ಎಲ್ಲಾ ಅಧ್ಯಾಪಕರಿಗೂ ಕ್ರಿಕೆಟ್ ತುಂಬಾ ಇಷ್ಟ. ನಾನು ಅವರ ಮನೆಗೆ ಮಧ್ಯಾಹ್ನ ಒಟ್ಟ ಬೇಗ ಮುಗಿಸಿ , ಪಂದ್ಯ ನೋಡಲು ಹೋಗುತ್ತಿದ್ದೆವು. ಸಂಜೆ ಕೊನೆಯ ಬಸ್ ಬರುವವರೆಗೆ ಪಂದ್ಯ ನೋಡೋದು ಬಿಡುತ್ತಿರಲಿಲ್ಲ.
ಟಿವಿ ನೋಡೋ ಹುಚ್ಚು ಒಳ್ಳೆಯ ಅನುಭವಗಳ ಜೊತೆಗೆ ಕಹಿ ನೆನಪುಗಳನ್ನು ಕೊಟ್ಟಿದೆ. ಭಾರತ ಪಾಕಿಸ್ತಾನದ ಪಂದ್ಯ ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ನಲ್ಲಿ ಮಾತ್ರ ಪ್ರಸಾರ ಆಗುತಿತ್ತು. ನಮ್ಮ ಮನೆಯಿಂದ ಎರಡು ಕಿಲೋಮೀಟರು ದೂರದಲ್ಲಿರುವ ಮನೆಯಲ್ಲಿ ಚಾನೆಲ್ ಇದೆ ಅಂತ ಗೊತ್ತಾಗಿ, ಅವರ ಮನೆಗೆ ಹೋದೆವು. ಅವರು ನಮ್ಮನ್ನು ನೋಡಿ , ನಮ್ಮ ಮನೆಯಲ್ಲಿ ಚಾನೆಲ್ ತಗೊಂಡಿಲ್ಲ ಅಂತ ಸುಳ್ಳು ಹೇಳಿದರು.. ಯಾಕೆ ಎಂದರೆ ಪಂದ್ಯದ ಕಾಮೆಂಟರಿ ನಮ್ಮ ಕಿವಿಗಳಿಗೆ ಕೇಳಿಸ್ತಾ ಇತ್ತು. ಇಂಗು ತಿಂದ ಮಂಗನ ಹಾಗೆ, ಮನೆಗೆ ವಾಪಾಸ್ ಬಂದೆವು.
ಇನ್ನೂ ಬರೆಯಲೂ ತುಂಬಾ ಇದೆ.. ಮುಂದಿನ ಲೇಖನದಲ್ಲಿ ಬರೆಯುತ್ತೇನೆ.

Comments
Post a Comment