ಅವಿಭಕ್ತ ಕುಟುಂಬದ ಕಥೆ-ವ್ಯಥೆ
ಈಗಿನ ಕಾಲದಲ್ಲಿ ಅವಿಭಕ್ತ ಕುಟುಂಬ ಒಂದು ಕನಸೇ ಸರಿ. ಅದಕ್ಕೆ ಈಗ ಕುಟುಂಬ ಎಂದರೆ ಬರೇ ಅಪ್ಪ ಅಮ್ಮ ಮತ್ತು ಮಕ್ಕಳು ಅಷ್ಟೇ ಅನ್ನೋ ಭಾವನೆ ಮಕ್ಕಳದ್ದು. ಈಗಿನ ಶಾಲಾ ಪುಸ್ತಕಗಳು ಕೂಡ ಇದನ್ನೇ ಕಲಿಸುತ್ತವೆ. ಮದುವೆಯಾದ ಮೇಲೆ ಹಾಗೂ ಹೀಗೋ ಅವಿಭಕ್ತ ಕುಟುಂಬ ಇದ್ದರೆ, ಬೇರೆ ತಮ್ಮದೇ ಮನೆ ಮಾಡೋ ಬಯಕೆ ಈಗಿನ ಕಾಲದದವರಿಗೆ. ನಾ ಓದಿದ ಬಹಳಷ್ಟು ಕಥೆ, ಚಿತ್ರಗಳು ಈ ಕವಿತೆಗೆ ಸ್ಪೂರ್ತಿ. ಈ ಕವಿತೆಯು ಒಂದು ಅವಿಭಕ್ತ ಕುಟುಂಬ ಮತ್ತು ವಿಭಕ್ತ ಕುಟುಂಬದ ನಡುವಿನ ಸಂಘರ್ಷವನ್ನು ತೋರಿಸುತ್ತದೆ.
ಹೊಸದಾಗಿ ಬಂದೆ ಮನೆಗೆ
ಸೊಸೆಯಾದ ನಾನು ಗಾಬರಿಯಾದೆ
ನೋಡಿ ಮನೆ ಬಹಳಷ್ಟು ಜನರು
ಎಲ್ಲರೊಡನೆ ಸ್ಸ್ವಲ್ಪ ದಿನ ಹೊಂದುವೆ
ಆಮೇಲೆ ಹೇಗೋ ಮಾಡುವೆ ಮನೆಯೊಂದು
ಗಂಡನ ಒಪ್ಪಿಸೋದು ಅದೇನು ಮಹಾ
ನನಗೆ ಗೊತ್ತು ಎಲ್ಲ ತರಹದ ಮಾಯಾ
ನೆಂಟರೆಂದರೆ ನನಗೆ ತುಂಬಾ ದೂರ
ಮನೆಯವರು ಹೊರಲಿ ಅವರ ಭಾರ
ನಾ ದುಡಿಯುವೆ ಮನೆಯ ಹೊರಗೆ
ಬಂದ ಮೇಲೆ ನಾ ರೂಮಿನ ಒಳಗೆ
ನನಗೇಕೆ ಈ ಮನೆ ಗೊಡವೆ
ಖರೀದಿಸಬೇಕು ಬೇಕು ಒಡವೆ
ತಗೋಬೇಕು ಹೊಸ ವಸ್ತು
ಹಣ ಜೋಡಿಸೋದರಲ್ಲಿ ನಾ ಸುಸ್ತು
ಗಂಡ ಕುಣಿಯಲಿಲ್ಲ ನನ್ನ ತಾಳಕ್ಕೆ
ಅಂದೇ ಹೂಡಿದೆ ನಾ ಹರತಾಳ
ಅಡುಗೆ ಮಾಡೋದು ನಿಲ್ಲಿಸಿದೆ
ಬೇರೆ ಮನೆ ಮಾಡೆಂದು ದುಂಬಾಲಿಸಿದೆ
ಕೊನೆಗೂ ನನ್ನ ಆಸೆ ಈಡೇರಿತು
ಆ ಸಮಯ ಬಂದೇ ಒದಗಿತು
ಹೊಸ ಮನೆ ಪ್ರವೇಶ ನಡೆಯಿತು
ಸ್ವರ್ಗ ಧರೆಗೆ ಬಂದ ಅರಿವಾಯಿತು
ಗಂಡ ಮಾತು ಕೇಳಿದ ಎಂದು ಹಿಗ್ಗಿದೆ
ಸವಿ ಸವಿಯಾದ ಅಡುಗೆಯ ಮಾಡಿದೆ
ಮನೆಗೆ ನಾನೇ ಆದೆ ಯಜಮಾನಿ
ಹೊಸ ವಸ್ತುಗಳು ಬಂದವು
ಮನೆ ಮನ ಕಂಗೊಳಿಸಿತು
'ನನ್ನ' ಕಡೆಯವರು ಬಂದರು
ಪ್ರಶಂಸೆಯ ಸುರಿಮಳೆ ಸುರಿದರು
ಇಂದೇಕೋ ಎಲ್ಲವು ತುಂಬಿದೆ
ಆದರೆ ಮನವೇಕೊ ಬರಿದಾಗಿದೆ
ಗಂಡ ಮೊದಲಿನಂತೆ ಇಲ್ಲ
ಲವಲವಿಕೆ ತುಂಬಿಲ್ಲ
ಕಷ್ಟ ಬಂದಾಗ ಅನಿಸುತಿದೆ
ಮನೆ ಅನಬೇಕು ಕಿಲಕಿಲ
ಮನವಿರಬೇಕು ಪ್ರಫುಲ್ಲ
ಅದಕ್ಕೆ ಬೇಕು ಅವಿಭಕ್ತ ಕುಟುಂಬ
-ದಿಲೀಪ್ ದೀಕ್ಷಿತ್
Comments
Post a Comment